ಸುದೀಪ್ ಗೆ ಚಿರುಋಣಿ ಎಂದ ತರುಣ್ ಸುಧೀರ್

ನಗರದ ಏಟ್ರಿಯಾ ಹೊಟೆಲ್ ನಲ್ಲಿ ನಡೆದ ರನ್ನ ಚಿತ್ರದ ಪತ್ರಿಕಾಗೋಷ್ಠಿ ಕೆಲ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.
ರನ್ನ ಚಿತ್ರದ ಸುದ್ಧಿಗೋಷ್ಠಿಯಲ್ಲಿ ಸುದೀಪ್, ತರುಣ್ ಮತ್ತು ನಂದಕಿಶೋರ್
ರನ್ನ ಚಿತ್ರದ ಸುದ್ಧಿಗೋಷ್ಠಿಯಲ್ಲಿ ಸುದೀಪ್, ತರುಣ್ ಮತ್ತು ನಂದಕಿಶೋರ್
Updated on

ಬೆಂಗಳೂರು: ನಗರದ ಏಟ್ರಿಯಾ ಹೊಟೆಲ್ ನಲ್ಲಿ ನಡೆದ ರನ್ನ ಚಿತ್ರದ ಪತ್ರಿಕಾಗೋಷ್ಠಿ ಕೆಲ ಭಾವುಕ ಕ್ಷಣಗಳಿಗೆ ಸಾಕ್ಷಿಯಾಯಿತು.

ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡಿದ್ದ ನಟ ತರುಣ್ ಸುಧೀರ್, ಸುದೀಪ್ ಅವರ ಸಹಾಯವನ್ನು ನೆನೆದು ವೇದಿಕೆಯ ಮೇಲೆಯೇ ಕಣ್ಣೀರಿಟ್ಟರು. "ನಮ್ಮ ಜೀವನದ ಕಠಿಣ ಪರಿಸ್ಥಿತಿಯಲ್ಲಿ ಸುದೀಪ್ ಅವರು ನಮ್ಮನ್ನು ಕರೆದು ಕೆಲಸ ನೀಡಿದ್ದಾರೆ.  ನಾನು ಕಾಲೇಜು ವಿದ್ಯಾರ್ಥಿಯಾಗಿದ್ದಾಗಿನಿಂದಲೂ ಸುದೀಪ್ ಅವರ ಅಭಿಮಾನಿ. ಅವರ `ಹುಚ್ಚ' ಚಿತ್ರ ನೋಡಿದಾಗಿನಿಂದ ಅವರ ಅಭಿಮಾನಿಯಾಗಿದ್ದೆ. ಅವರ ಜೊತೆಗೆ ಕೆಲಸ ಮಾಡುವ ಅವಕಾಶ ಈ ಚಿತ್ರದಲ್ಲಿ ಸಿಕ್ಕಿತು. ನಾವು ಕಷ್ಟದಲ್ಲಿದ್ದಾಗ ನಂದನಿಗೆ ಅವಕಾಶ ಕೊಟ್ಟಿದ್ದು ಅವರೇ. ತಂದೆ ಸ್ಥಾನದಲ್ಲಿ ನಿಂತು ನಮ್ಮನ್ನೆಲ್ಲಾ ಅವರು ಬೆಳೆಸಿದ್ದಾರೆ. ನಮ್ಮ ಇಡೀ ಕುಟುಂಬ ಅವರಿಗೆ ಜೀವನಪೂರ್ತಿ ಚಿರಋಣಿಯಾಗಿರುತ್ತೇವೆ' ಎಂದು ಹೇಳುತ್ತಲೇ ತರುಣ್  ಭಾವುಕರಾದರು. ತಮ್ಮ ಸಹೋದರ ಕಣ್ಣೀರು ಹಾಕುತ್ತಿದ್ದನ್ನು ನೋಡಿದ ನಂದಕಿಶೋರ್ ಅವರು ಸಹ ಅತ್ತರು.

ಬಳಿಕ ಮಾತನಾಡಿದ ರನ್ನ ಚಿತ್ರದ ನಿರ್ದೇಶಕ ನಂದ ಕಿಶೋರ್ ಅವರು. `ನಾವು ತುಂಬಾ ಕಷ್ಟದಲ್ಲಿದ್ದಾಗ ಸಹಾಯ ಮಾಡಿದ್ದು ಸುದೀಪ್ ಅವರು. ನಾನು ಸುದೀಪ್ ಅವರ ಅಭಿಮಾನಿ. ಅವರ ಜೊತೆಗೆ ಕೆಲಸ ಮಾಡಿ ಹೂವಿನ ಜೊತೆಗೆ ನಾರು ಸಹ ಸ್ವರ್ಗಕ್ಕೆ ಹೋದಂತಾಯಿತು' ಎಂದರು ಹೇಳಿದರು.

ಸುದೀಪ್ ಮತ್ತು ರಚಿತಾ ರಾಮ್ ಅಭಿನಯದ ಬಹು ನಿರೀಕ್ಷಿತ ರನ್ನ ಚಿತ್ರವನ್ನು ತರುಣ್ ಸುಧೀರ್ ಅವರ ಸಹೋದರರಾದ ನಂದ ಕಿಶೋರ್ ಅವರು ನಿರ್ದೇಶಿಸುತ್ತಿದ್ದು, ತರುಣ್ ತಮ್ಮ ಅಣ್ಣನ ಬೆನ್ನೆಲುಬಾಗಿ ಈ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com