ನಾಳೆ ರಾಕ್ಷಸಿ, ಊಜಾ ಮತ್ತು ವಂಶೋದ್ಧಾರಕ ತೆರೆಗೆ

ನಾಳೆ ಕನ್ನದ ಸಿನೆಮಾ ರಸಿಕರಿಗೆ ಮನರಂಜನೆ ಉಣಬಡಿಸಲು ಮೂರೂ ಸಿನೆಮಾಗಳು ಸಿದ್ಧವಾಗಿದೆ. ಅವಗಳಲ್ಲಿ ಎರಡು ಹಾರರ್ ಸಿನೆಮಾಗಳಾದರೆ ಒಂದು ನಟ ಆದಿತ್ಯ ಚಿಕ್ಕಣ್ಣ ನಿರ್ದೇಶನದಲ್ಲಿ
ವಂಶೋದ್ಧಾರಕ ಸಿನೆಮಾದ ಭಿತ್ತಿಚಿತ್ರ
ವಂಶೋದ್ಧಾರಕ ಸಿನೆಮಾದ ಭಿತ್ತಿಚಿತ್ರ

ಬೆಂಗಳೂರು: ನಾಳೆ ಕನ್ನದ ಸಿನೆಮಾ ರಸಿಕರಿಗೆ ಮನರಂಜನೆ ಉಣಬಡಿಸಲು ಮೂರೂ ಸಿನೆಮಾಗಳು ಸಿದ್ಧವಾಗಿದೆ. ಅವಗಳಲ್ಲಿ ಎರಡು ಹಾರರ್ ಸಿನೆಮಾಗಳಾದರೆ ಒಂದು ನಟ ಆದಿತ್ಯ ಚಿಕ್ಕಣ್ಣ ನಿರ್ದೇಶನದಲ್ಲಿ ವಿಜಯ ರಾಘವೇಂದ್ರ ನಟಿಸಿರುವ ಫ್ಯಾಮಿಲಿ ಸೆಂಟಿಮೆಂಟ್ ಸಿನೆಮಾ ವಂಶೋದ್ಧಾರಕ.

ರಾಕ್ಷಸಿ: ೨೦೧೪ರಲ್ಲಿ ಬಿಡುಗಡೆಯಾಗಿದ್ದ್ ಮಿಸ್ಕಿನ್ ನಿರ್ದೇಶನದ ತಮಿಳು ಸಿನೆಮಾ 'ಪಿಸಾಸು'ವಿನ ರಿಮೇಕ್. ಕಡಿಮೆ ಬಜೆಟ್ ನಲ್ಲಿ ನಿರ್ಮಿಸಲಾಗಿದ್ದ ಈ ಸಿನೆಮ ಒಳ್ಳೆಯ ಯಶಸ್ಸು ಕಂಡಿತ್ತು. ತಮಿಳಿನ ಖ್ಯಾತ ನಿರ್ದೇಶಕ ಮುರುಗದಾಸ್ ಅವರ ಶಿಷ್ಯ ಆಶ್ರಪ್ ಈ ಸಿನೆಮಾವನ್ನು ಕನ್ನಡದಲ್ಲಿ ನಿರ್ದೇಶಿಸಿದ್ದು ಸಿಂಧು ಲೋಕನಾಥ್ ಮುಖ್ಯಭೂಮಿಕೆಯಲ್ಲಿದ್ದಾರೆ.

ಊಜಾ: ಆತ್ಮ ಅಥವಾ ಸ್ಪಿರಿಟ್ ಎಂದು ಕರೆಯಲಾಗುವುದರ ಕಥೆ ಇಟ್ಟುಕೊಂಡು ನಿರ್ದೇಶಕ ರಾಜಕುಮಾರ್ ರೆಡ್ಡಿ ಅವರ ನಿರ್ದೇಶನ ಹಾರರ್ ಚಿತ್ರ ಇದು.  ಶ್ರದ್ಧಾ ದಾಸ್, ಭರತ್, ಗಾಯಿತ್ರಿ ಮುಂತಾದ ಹೊಸ ಮುಖಗಳನ್ನು ಸಿನೆಮಾದಲ್ಲಿ ಪರಿಚಯಿಸುತ್ತಿದ್ದು, ಹಿರಿಯ ನಟ ಅವಿನಾಶ್ ಕೂಡ ನಟಿಸಿದ್ದಾರೆ.

ವಂಶೋದ್ಧಾರಕ: ಆದಿತ್ಯ ಚಿಕ್ಕಣ್ಣ ನಿರ್ದೇಶನದಲ್ಲಿ ಚಿನ್ನಾರಿಮುತ್ತ ವಿಜಯ್ ರಾಘವೇಂದ್ರ ನಟಿಸಿರುವ ವಂಶೋದ್ಧಾರಕ ಕೌಟುಂಬಿಕ ಭಾವನಾತ್ಮಕ ಚಿತ್ರ. ಮೇಘನಾ ರಾಜ್ ನಾಯಕಿಯಾಗಿ ನಟಿಸಿದ್ದರೆ, ಲಕ್ಷ್ಮಿ, ರಂಗಾಯಣ ರಘು, ಸಾಧು ಕೋಕಿಲಾ ಮುಂತಾದ ದೊಡ್ಡ ತಾರಾಗಣದ ಬಲವೇ ಇದೆ. ಸಂಗೀತ ವಿ ಮನೋಹರ್ ಅವರದ್ದು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com