ದೇವರ ಮಗ "ಹರೀಶ್ ರಾಜ್"

ಓಂ ಸಾಯಿ ಪ್ರಕಾಶ್ ನಿರ್ದೇಶನದ ‘ಶ್ರೀಸಾಯಿ’ ಈಗಾಗಲೇ ಬಿಡುಗಡೆ ಆಗಿದೆ. ಶಶಿ ಕುಮಾರ್ ನಿರ್ದೇಶನದ ‘ಸಿಗಂದೂರು ಚೌಡೇಶ್ವರಿ’ ಚಿತ್ರದ ಆಡಿಯೋ ಈಗಷ್ಟೇ ಬಿಡುಗಡೆ ಆಗಿದೆ..
ನಟ ಹರೀಶ್ ರಾಜ್ (ಸಂಗ್ರಹ ಚಿತ್ರ)
ನಟ ಹರೀಶ್ ರಾಜ್ (ಸಂಗ್ರಹ ಚಿತ್ರ)
Updated on: 

ನಟ ಹರೀಶ್ ರಾಜ್ ಈಗ ಪಕ್ಕಾ ಭಕ್ತಿ ಪ್ರಧಾನ ಚಿತ್ರಗಳಿಗೆ ಬ್ರಾಂಡ್ ಆಗಿದ್ದಾರೆ. ಈ ವರ್ಷದ ಮಟ್ಟಿಗೆ ಅವರು ಭಕ್ತಿ ಪ್ರಧಾನ ಚಿತ್ರಗಳಲ್ಲಿಯೇ ಹೆಚ್ಚಾಗಿ ಅಭಿನಯಿಸಿದ್ದಾರೆ. ‘ನಮೋ ಭೂತಾತ್ಮ ’ಚಿತ್ರದ ನಂತರ ಬ್ಯಾಕ್ ಟು ಬ್ಯಾಕ್ ಮೂರು ಭಕ್ತಿ ಪ್ರಧಾನ ಚಿತ್ರಗಳಲ್ಲಿ ಅಭಿನಯಿಸುವ ಅವಕಾಶ ಅವರಿಗೆ ಸಿಕ್ಕಿದೆ.

ಓಂ ಸಾಯಿ ಪ್ರಕಾಶ್ ನಿರ್ದೇಶನದ ‘ಶ್ರೀಸಾಯಿ’ ಈಗಾಗಲೇ ಬಿಡುಗಡೆ ಆಗಿದೆ. ಶಶಿ ಕುಮಾರ್ ನಿರ್ದೇಶನದ ‘ಸಿಗಂದೂರು ಚೌಡೇಶ್ವರಿ’ ಚಿತ್ರದ ಆಡಿಯೋ ಈಗಷ್ಟೇ ಬಿಡುಗಡೆ ಆಗಿದೆ. ಇನ್ನು ತಾವೇ ನಿರ್ಮಿಸಿರುವ ‘ಶ್ರೀ ಸತ್ಯನಾರಾಯಣ’ ಚಿತ್ರದಲ್ಲೂ ಅವರೇ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದು, ಅದು ಡಿಸೆಂಬರ್ ಅಂತ್ಯದೊಳಗೆ ತೆರೆ ಕಾಣುವ ಸಾಧ್ಯತೆಯಿದೆ. ಒಂದೇ ರೀತಿಯ ಕಥೆ  ಅಥವಾ ಪಾತ್ರಗಳಿಗೆ ಒಬ್ಬ ನಟ ಬ್ರಾಂಡ್ ಆಗುವುದರಲ್ಲೂ ಅಪಾಯವಿದೆ. ಆದರೆ, ಅಂಥದ್ದೇ ಚಿತ್ರಗಳ ಮೂಲಕ ತಮ್ಮ ಇಮೇಜ್ ಹೆಚ್ಚಿಸಿಕೊಳ್ಳುವುದು ಕೂಡ ನಟರ ಕಲೆಗಾರಿಕೆಯೂ ಹೌದು. ಸದ್ಯ ಈ ಅವಕಾಶ ನಟ ಹರೀಶ್ ರಾಜ್ ಅವರಿಗೆ ಒದಗಿ ಬಂದಿದೆ.

ಹಲವು ಕಂಪನಿಗಳ ಉತ್ಪನ್ನಗಳ ಪ್ರಚಾರಕ್ಕೆ ಮಾಡೆಲಿಂಗ್ ಮಾಡುವ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟ ಹರೀಶ್ ರಾಜ್, ಗೆದ್ದಿದ್ದಕ್ಕಿಂತ ಸೋತಿದ್ದೆ ಹೆಚ್ಚು. ದೊಡ್ಡದೊಂದು ಸಕ್ಸಸ್ ಈಗಲೂ ಅವರಿಗೆ ಮರೀಚಿಕೆಯಂತಾಗಿದೆ. ಆದರೂ ಬೆಳ್ಳಿತೆರೆಯಲ್ಲಿ ತಮ್ಮ ಇರುವಿಕೆಯನ್ನು ಪ್ರದರ್ಶಿಸುವ ಹಂಬಲದಲ್ಲಿರುವ ಅವರಿಗೆ, ಈ ವರ್ಷದಲ್ಲಿ ಸಿಕ್ಕ ಅವಕಾಶಗಳೆಲ್ಲ ದೇವರೇ ಕೊಟ್ಟಿದ್ದು! ‘ನಟ ಕೋಮಲ್  ಜತೆಗೆ ‘ನಮೋ ಭೂತಾತ್ಮ’ ಚಿತ್ರದಲ್ಲಿ ಅಭಿನಯಿಸಿದ ನಂತರ ಸ್ಪಲ್ಪ ಬಿಡುವು ಸಿಕ್ಕಿತ್ತು. ಯಾವುದೇ ಸಿನಿಮಾಗಳಿಗೆ ಕಮಿಟ್ ಆಗಿರಲಿಲ್ಲ.

ಹಾಗಾಗಿ ನನ್ನದೇ ಬ್ಯಾನರ್‌ನಲ್ಲಿ ‘ಶ್ರೀ ಸತ್ಯ ನಾರಾಯಣ’ಚಿತ್ರದ ನಿರ್ಮಾಣಕ್ಕೆ ಕೈ ಹಾಕಿದೆ. ಇದಾಗಿ ವಾರ ಕಳೆಯುವಷ್ಟರಲ್ಲಿಯೇ ‘ಶ್ರೀ ಸಾಯಿ’ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಬಂತು. ಇದು ಸಾಯಿ ಬಾಬಾನ ಕೃಪೆ. ಯಾಕೆಂದರೆ ಶಿರಡಿ  ಸಾಯಿಬಾಬಾನ ದರ್ಶನ ಪಡೆದು ಬಂದ ಮೇಲೆ ನನ್ನ ಬದುಕಿನಲ್ಲಿ ಒಳ್ಳೆಯದನ್ನು ಕಾಣುತ್ತಿದ್ದೇನೆ. ಕಾಕತಾಳೀಯ ಎನ್ನುವ ಹಾಗೆ, ಅದೇ ಬಾಬಾನ ಚಿತ್ರದಲ್ಲಿ ಅಭಿನಯಿಸುವ ಅವಕಾಶ  ಸಿಕ್ಕಿದೆ’ಎನ್ನುತ್ತಾರೆ ನಟ ಹರೀಶ್ ರಾಜ್.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com