ಪೋರ್ನ್ ನಟಿ ಮತ್ತು ಕೆಲವು ಪಾತಕಿಗಳಿಗೆ ಆತ್ಮಕತೆ ಅರ್ಪಿಸಿದ ರಾಮ್ ಗೋಪಾಲ್ ವರ್ಮಾ

ನಿರ್ದೇಶಕ-ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ವರು ತಮ್ಮ ಆತ್ಮಕಥೆ 'ಗನ್ಸ್ & ಥೈಸ್' ಅನ್ನು ಕೆಲವು ನಟರು, ಒಬ್ಬ ಲೇಖಕಿ, ಒಬ್ಬ ಪೋರ್ನ್ ನಟಿ ಮತ್ತು ಕೆಲವು ಪಾತಕಿಗಳಿಗೆ
ನಿರ್ದೇಶಕ-ನಿರ್ಮಾಪಕ ರಾಮ್ ಗೋಪಾಲ್ ವರ್ಮಾ
ನಿರ್ದೇಶಕ-ನಿರ್ಮಾಪಕ ರಾಮ್ ಗೋಪಾಲ್ ವರ್ಮಾ
Updated on: 

ಮುಂಬೈ: ನಿರ್ದೇಶಕ-ನಿರ್ಮಾಪಕ ರಾಮ್ ಗೋಪಾಲ್ ವರ್ಮಾ ವರು ತಮ್ಮ ಆತ್ಮಕಥೆ 'ಗನ್ಸ್ & ಥೈಸ್' ಅನ್ನು ಕೆಲವು ನಟರು, ಒಬ್ಬ ಲೇಖಕಿ, ಒಬ್ಬ ಪೋರ್ನ್ ನಟಿ ಮತ್ತು ಕೆಲವು ಪಾತಕಿಗಳಿಗೆ ಅರ್ಪಿಸಿದ್ದಾರೆ. ತಮ್ಮ ಜೀವನ ರೂಪುಗೊಳ್ಳಲು ಇವರೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಕಾರಣರಾಗಿದ್ದಾರೆ ಎಂದು ತಿಳಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಆರ್ ಜಿ ವಿ "ನನ್ನ ಪುಸ್ತಕವನ್ನು ಅಯನ್ ರ್ಯಾಂಡ್, ಬ್ರೂಸ್ ಲೀ, ಊರ್ಮಿಳಾ ಮಟೋಂಡ್ಕರ್, ಅಮಿತಾಬ್ ಬಚ್ಚನ್, ಪೋರ್ನ್ ನಟಿ ಟೋರಿ ಬ್ಲ್ಯಾಕ್ ಮತ್ತು ಕೆಲವು ಪಾತಕಿಗಳಿಗೆ ಅರ್ಪಿಸುತ್ತೇನೆ" ಎಂದು ಬರೆದುಕೊಂಡಿದ್ದಾರೆ.

"ಅವರೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ನನ್ನ ಜೀವನ ರೂಪುಗೊಳ್ಳಲು ಕಾರಣವಾಗಿದರಿಂದ ಈ ಅರ್ಪಣೆ" ಎಂದು ಕೂಡ ನಿರ್ದೇಶಕ ಹೇಳಿದ್ದಾರೆ.

ವರ್ಮಾ ಅವರ ಜೀವನದಲ್ಲಿ ನಡೆದ ಹಲವು ಕುತೂಹಲಕಾರಿ, ವಿವಾದಾತ್ಮಕ ಘಟನೆಗಳ ಬಗ್ಗೆ, ಅಮಿತಾಬ್ ಬಚ್ಚನ್ ಅವರನ್ನು ಇಡಿಯಟ್ ಎಂದು ಕರೆದುದರ ಬಗ್ಗೆ, ಭೂಗತ ಲೋಕದಲ್ಲಿನ ತಮ್ಮ ಪಯಣದ ಬಗ್ಗೆ ಹಾಗು ಮಹಿಳೆಯರೊಂದಿಗಿನ ಸಂಬಂಧದ ಬಗ್ಗೆ ಮುಂಚೆ ತಿಳಿಯದ ವಿಷಯಗಳಿವೆ ಎಂದು ವರ್ಮಾ ಹಿಂದೆ ತಿಳಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com