ಡೇವಿಡ್ ಬೆಕ್ ಹ್ಯಾಮ್ ವಿಡಿಯೋ

ಪ್ಯಾರಿಸ್ ಮೇಲೆ ದಾಳಿ ನಡೆದ ಬಳಿಕ ಜಗತ್ತಿನ ಎಲ್ಲ ಕಡೆಗಳಿಂದಲೂ ಪ್ಯಾರಿಸ್‍ಗೆ ಸ್ಪಂದನೆ, ಉಗ್ರದಾಳಿಗೆ ಖಂಡನೆ ವ್ಯಕ್ತವಾಗುತ್ತಿದೆ.
ಡೇವಿಡ್ ಬೆಕ್‍ಹ್ಯಾಮ್
ಡೇವಿಡ್ ಬೆಕ್‍ಹ್ಯಾಮ್

ಪ್ಯಾರಿಸ್ ಮೇಲೆ ದಾಳಿ ನಡೆದ ಬಳಿಕ ಜಗತ್ತಿನ ಎಲ್ಲ ಕಡೆಗಳಿಂದಲೂ ಪ್ಯಾರಿಸ್‍ಗೆ ಸ್ಪಂದನೆ, ಉಗ್ರದಾಳಿಗೆ ಖಂಡನೆ ವ್ಯಕ್ತವಾಗುತ್ತಿದೆ. ಈ ಪೈಕಿ ಕ್ರೀಡಾ ಪಟುಗಳು ಸ್ಪಂದಿಸಿರುವ ರೀತಿ ಭಿನ್ನ. ಡೇವಿಡ್ ಬೆಕ್‍ಹ್ಯಾಮ್ ನಿಂದ ಆರಂಭವಾಗಿ ಹಲವು ಕ್ರೀಡಾಪಟುಗಳು `ನಾನು ಪ್ಯಾರಿಸ್' ಹೇಳಿಕೆ ನೀಡುವ ವಿಡಿಯೋ ಪ್ಯಾರಿಸ್‍ನಲ್ಲಿ ವೈರಲ್ ಆಗಿದೆ. ಕ್ರಿಶ್ಚಿಯಾನೊ ರೊನಾಲ್ಡೊ, ಮೆಸ್ಸಿ, ರೂನಿ, ಆಂಡ್ರೆ ಅಗಾಸ್ಸಿ, ಸೇರಿದಂತೆ 52 ಕ್ರೀಡಾಪಟುಗಳು ಪ್ಯಾರಿಸ್‍ಗೆ ಬೆಂಬಲ ಸೂಚಿಸಿರುವ ವಿಡಿಯೋ ಇದು. ಭಾನುವಾರ ಇಂಗ್ಲೆಂಡ್‍ನಲ್ಲಿ ನಡೆದ ಲೀಗ್ 1 ಪಂದ್ಯದ ವೇಳೆ, ಮೊದಲ ಬಾರಿಗೆ ಇದು ಪ್ಯಾರಿಸ್‍ ನ ಸೇಂಟ್ ಜರ್ಮೈನ್‍ನಲ್ಲಿ ಪಂದ್ಯದಕ್ಕೂ ಮೊದಲು ಪ್ರದರ್ಶಿಸಲಾಯಿತು. ಡೇವಿಡ್‍ನಿಂದ ಆರಂಭವಾದ ಈ ಕೆಲಸ ಪ್ಯಾರಿಸಿಗರ ಮೆಚ್ಚುಗೆಗೆ ಪಾತ್ರವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com