ಹೈದರಾಬಾದ್: ಅನಾರೋಗ್ಯದಿಂದ ಬಳಲುತ್ತಿದ್ದ ತೆಲುಗು ಚಿತ್ರನಟ ಮಾದ ವೆಂಕಟೇಶ್ವರ ರಾವ್ ಅವರು ವಿಧಿವಶರಾಗಿದ್ದಾರೆ.
65 ವರ್ಷದ ವೆಂಕಟೇಶ್ವರ ರಾವ್ ಅವರು ಹೈದರಾಬಾದ್ ನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಕಳೆದ ರಾತ್ರಿ ನಿಧನರಾಗಿದ್ದಾರೆ ಎಂದು ಭಾನುವಾರ ಕುಟುಂಬ ಸದಸ್ಯರು ತಿಳಿಸಿದ್ದಾರೆ.
1977ರಲ್ಲಿ ದಾಸರಿ ನಾರಾಯಣರಾವ್ ನಿರ್ದೇಶಿಸಿದ್ದ ಚಿಲ್ಲರ ಕೊಟ್ಟು ಚಿಟ್ಟೆಮ್ಮ ಚಿತ್ರದ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು.
ಖ್ಯಾತ ಹಾಸ್ಯನಟರಾದ ಮಾದ ಅವರು 300ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದರು. ಇವುಗಳಲ್ಲಿ ಕೆಲವು ಚಿತ್ರಗಳು ಇತರ ಪ್ರಾದೇಶಿಕ ಭಾಷೆಗಳಲ್ಲೂ ಬಂದಿವೆ. ‘ಮುತ್ಯಾಲ ಮುಗ್ಗು’, ‘ಲಂಬದೊಲ್ಲ ರಾಮ ದಾಸ್’, ‘ಮಾಯಾದರಿ ಮಲ್ಲಿಗಡು’ ಇತ್ಯಾದಿ ಚಿತ್ರಗಳ ಪಾತ್ರಗಳು ಅವರಿಗೆ ಅಪಾರ ಕೀರ್ತಿ ತಂದಿದ್ದವು.