

ಹೈದರಾಬಾದ್: ಹೈದರಾಬಾದ್ ನಲ್ಲಿ ನವೆಂಬರ್ 14 ರಿಂದ 20 ವರೆಗೆ ನಡೆಯಲಿರುವ 19 ನೇ ಅಂತರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ(ಐಸಿಎಫ್ಎಫ್ಐ)ಕ್ಕೆ ಡಿಜಿಟಲ್ ಇಂಡಿಯಾ ವಿಷಯವಾಗಿರಲಿದೆ.
ತೆಲಂಗಾಣ ಸರ್ಕಾರದ ಸಹಯೋಗದಲ್ಲಿ ನಡೆಸಲಾಗುತ್ತಿರುವ ಚಲನಚಿತ್ರೋತ್ಸವ ರಾಜ್ಯದ 9 ಜಿಲ್ಲೆಗಳಲ್ಲಿ ಮಕ್ಕಳ ಚಿತ್ರಗಳನ್ನು ಏಕಕಾಲಿಕಕ್ಕೆ ಪ್ರದರ್ಶಿಸಲು ಉದ್ದೇಶಿಸಲಾಗಿದೆ ಎಂದು ಭಾರತದ ಮಕ್ಕಳ ಚಲನಚಿತ್ರ ಸಂಸ್ಥೆಯ ಅಧಿಕಾರಿ ಹೇಳಿದ್ದಾರೆ. 19 ನೇ ಅಂತಾರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವಕ್ಕೆ ಈಗಾಗಲೇ 1204 ಚಿತ್ರಗಳು ಪ್ರವೇಶ ಪಡೆದಿದ್ದು, ಇದೇ ಮೊದಲ ಬಾರಿಗೆ ಅತಿ ಹೆಚ್ಚು ಜನರು ಹೆಸರನ್ನು ನಮೂದಿಸಿದಾರೆ.
ಡಿಜಿಟಲ್ ಇಂಡಿಯಾ ವಿಷಯ ಚಿತ್ರೋತ್ಸವದ ಕೇಂದ್ರವಸ್ತುವಾಗಿರಲಿದೆ. ಭಾರತ, ಅಜೆಂಟಿನಾ, ಯುಎಇ, ರಷ್ಯಾ, ತೈವಾನ್, ಬೆಲ್ಜಿಯಮ್, ಆಸ್ಟ್ರೇಲಿಯಾ ಸೇರಿದಂತೆ 180 ದೇಶಗಳಿಂದ ಮಕ್ಕಳ ಕಿರು ಚಿತ್ರಗಳು ಬಂದಿವೆ ಎಂದು ಸಿಎಫ್ಎಸ್ಐ ಸಿಇಒ ಶರವನ್ ಕುಮಾರ್ ಹೇಳಿದ್ದಾರೆ.