ರಕ್ಷಿತ್ ಶೆಟ್ಟಿಯ ಕಿರಿಕ್ ಪಾರ್ಟಿಗೆ ಮುಹೂರ್ತ

ಸಿಂಪಲ್ಲಾಗೊಂದ್ ಲವ್ ಸ್ಟೋರಿ ಖ್ಯಾತಿಯ ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು...
ಕಿರಿಕ್ ಪಾರ್ಟಿ
ಕಿರಿಕ್ ಪಾರ್ಟಿ

ಸಿಂಪಲ್ಲಾಗೊಂದ್ ಲವ್ ಸ್ಟೋರಿ ಖ್ಯಾತಿಯ ರಕ್ಷಿತ್ ಶೆಟ್ಟಿ ನಟನೆಯ ಕಿರಿಕ್ ಪಾರ್ಟಿ ಚಿತ್ರಕ್ಕೆ ಮುಹೂರ್ತ ನೆರವೇರಿಸಲಾಯಿತು.

ರಕ್ಷಿತ್ ಶೆಟ್ಟಿಯ ಪರಂವಾ ಸ್ಟುಡಿಯೋಸ್ ದಿಂದ ನಿರ್ಮಾಣವಾಗುತ್ತಿರುವ ಚೊಚ್ಚಲ ಚಿತ್ರಕ್ಕೆ ಕಿರಿಕ್ ಪಾರ್ಟಿಗೆ ರಿಕ್ಕಿ ಚಿತ್ರದ ಮೂಲಕ ನಿರ್ದೇಶನಕ್ಕೀಳಿದ ರಿಷಭ್ ಶೆಟ್ಟಿ ನಿರ್ದೇಶನವಿದೆ. ರಕ್ಷಿತ್ ಶೆಟ್ಟಿಗೆ ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತಾ ಹೆಗಡೆ ಸಾಥ್ ನೀಡುತ್ತಿದ್ದಾರೆ.

ತುಘಲಕ್ ಚಿತ್ರಕ್ಕಿಂತ ಮುಂಚೆಯೇ ಕಿರಿಕ್ ಪಾರ್ಟಿ ಕಥೆ ರೆಡಿಯಾಗಿತಂತೆ. ಆದರೆ ರಕ್ಷಿತ್ ಶೆಟ್ಟಿ ತನ್ನದೇ ಪ್ರೋಡಕ್ಷನ್ ಹೌಸ್ ಶುರು ಮಾಡಿದ ಮೇಲೆ ಯಾವ ಚಿತ್ರ ಮಾಡೋದು ಎನ್ನುವ ಚರ್ಚೆ ವೇಳೆ ಕಿರಿಕ್ ಪಾರ್ಟಿ ಸ್ಟೋರಿಯನ್ನು ಆರಿಸಿಕೊಂಡಿದ್ದಾರೆ. ಕಾಲೇಜು ದಿನಗಳ ರಿಯಲ್ ಅನುಭವವನ್ನೇ ಚಿತ್ರವನ್ನಾಗಿ ಮಾಡುತ್ತಿದೆ ಚಿತ್ರ ತಂಡ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com