ಹೌದು, ನಾನು ತಂದೆಯಾಗುತ್ತಿದ್ದೇನೆ: ಶಾಹಿದ್ ಕಪೂರ್

ಬಾಲಿವುಡ್ ನಟ ಶಾಹಿದ್ ಕಪೂರ್ ಅವರು ತಂದೆಯಾಗುತ್ತಿದ್ದಾರೆಂಬ ಗುಮಾನಿ ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡ ತೊಡಗುತ್ತಿದ್ದಂತೆ ಇದೀಗ ಸ್ವತಃ ಶಾಹಿದ್ ಅವರು...
ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್
ಶಾಹಿದ್ ಕಪೂರ್ ಹಾಗೂ ಮೀರಾ ರಜಪೂತ್
Updated on: 

ಮುಂಬೈ: ಬಾಲಿವುಡ್ ನಟ ಶಾಹಿದ್ ಕಪೂರ್ ಅವರು ತಂದೆಯಾಗುತ್ತಿದ್ದಾರೆಂಬ ಸುದ್ದಿ ಸಾಮಾಜಿಕ ಜಾಲತಾಣದಾದ್ಯಂತ ಹರಿದಾಡ ತೊಡಗುತ್ತಿದ್ದಂತೆ ಇದೀಗ ಸ್ವತಃ ಶಾಹಿದ್ ಅವರು ತಾವು ತಂದೆಯಾಗುತ್ತಿರುವುದಾಗಿ ಒಪ್ಪಿಕೊಂಡಿದ್ದಾರೆ.

ಉಡ್ತಾ ಪಂಜಾಬ್ ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿರುವ ಅವರು, ಸುತ್ತಿ ಬಳಸಿ ಏಕೆ ಕೇಳುತ್ತೀರಿ. ನೇರವಾಗಿ ಪ್ರಶ್ನೆ ಕೇಳಿದೆ. ಹೌದು, ನಾನು ತಂದೆಯಾಗುತ್ತಿದ್ದೇನೆಂದು ಹೇಳಿದ್ದಾರೆ.

ಈ ಹಿಂದೆ ಫ್ಯಾಷನ್ ವೀಕ್ ಕಾರ್ಯಕ್ರಮವೊಂದರಲ್ಲಿ ಮೀರಾ ಪಾಲ್ಗೊಂಡಿದ್ದರು. ಈ ವೇಳೆ ರ್ಯಾಂಪ್ ಮೇಲೆ ಮೀರಾ ವಾಕ್ ಮಾಡಿದ್ದರು. ಇದನ್ನು ನೋಡಿದ್ದ ಕೆಲವರು ಮೀರಾ ಗರ್ಭಿಣಿಯಾಗಿದ್ದಾರೆಂಬ ಮಾತನ್ನು ಹಬ್ಬಿಸಿದ್ದರು. ಇದೀಗ ಸ್ವತಃ ಶಾಹಿದ್ ಅವರೇ ತಾವು ತಂದೆಯಾಗುತ್ತಿರುವುದಾಗಿ ಹೇಳಿಕೊಂಡಿದ್ದು, ಎಲ್ಲಾ ಊಹಾಪೋಹಗಳಿಗೆ ಬ್ರೇಕ್ ಬಿದ್ದಿದೆ.

ಶಾಹಿದ್ ಕಪೂರ್ ಕಳೆದ ವರ್ಷ ಜುಲೈ ತಿಂಗಳಿನಲ್ಲಿ ತಮ್ಮ ಗೆಳತಿ ಮೀರಾ ರಜಪೂತ್ ಅವರೊಂದಿಗೆ ಹಸೆಮಣೆ ಏರಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com