ನಾಳೆ ರಾಕಿಂಗ್ ಸ್ಟಾರ್ ಯಶ್- ನಟಿ ರಾಧಿಕಾ ನಿಶ್ಚಿತಾರ್ಥ

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಇದೇ ಶುಕ್ರವಾರ ಅಂದರೇ ವರಮಹಾಲಕ್ಷ್ಮಿ ಹಬ್ಬದ ದಿನ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ....
ನಟ ಯಶ್ ಮತ್ತು ರಾಧಿಕಾ ಪಂಡಿತ್
ನಟ ಯಶ್ ಮತ್ತು ರಾಧಿಕಾ ಪಂಡಿತ್

ಬೆಂಗಳೂರು:  ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಇದೇ ಶುಕ್ರವಾರ ಅಂದರೆ ವರಮಹಾಲಕ್ಷ್ಮಿ ಹಬ್ಬದ ದಿನ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ. ಖಾಸಗಿ ಸಮಾರಂಭದಲ್ಲಿ ನಡೆಯುವ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಕುಟುಂಬಸ್ಥರು ಮತ್ತು ಕೆಲವೇ ಆಪ್ತರು ಪಾಲ್ಗೊಳ್ಳಲಿದ್ದಾರೆ.

ಬಹಳ ದಿನಗಳಿಂದ ಈ ಜೋಡಿಯ ಪ್ರೀತಿ ವಿಚಾರ ಸುದ್ದಿಯಲ್ಲಿದ್ದರೂ ಯಾರೊಬ್ಬರೂ ಎಲ್ಲೂ ಬಹಿರಂಗವಾಗಿ ಇದರ ಬಗ್ಗೆ ಮಾತನಾಡಿರಲಿಲ್ಲ. ಆದ್ರೆ ಎರಡೂ ಕುಟುಂಬಗಳ ಒಪ್ಪಿಗೆಯ ಮೇರೆಗೆ ಶುಕ್ರವಾರ ಗೋವಾದಲ್ಲಿರುವ ರಾಧಿಕಾ ಅಜ್ಜಿಯ ಮನೆಯಲ್ಲಿ ನಿಶ್ಚಿತಾರ್ಥ ನೆರವೇರಲಿದೆ. ಡಿಸೆಂಬರ್‌ನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ.

ಆದರೆ ನಿಶ್ಚಿತಾರ್ಥ ಸುದ್ದಿಯನ್ನು ಯಶ್ ಮತ್ತು ರಾಧಿಕಾ ಇನ್ನೂ ಖಚಿತಪಡಿಸಿಲ್ಲ. ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನಂದಗೋಕುಲ ಎನ್ನುವ ಧಾರಾವಾಹಿಯಲ್ಲಿ ಇವರಿಬ್ಬರೂ ತಮ್ಮ ವೃತ್ತಿಬದುಕು ಶುರು ಮಾಡಿದ್ದರು. ನಂತರ ಮೊಗ್ಗಿನ ಮನಸ್ಸು ಮೂಲಕ ಜೋಡಿಯಾಗಿ ಚಿತ್ರರಂಗ ಪ್ರವೇಶಿಸಿದರು. ಆಮೇಲೆ ಇಬ್ಬರೂ ಅನೇಕ ಯಶಸ್ವಿ ಚಿತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನೆಲೆಯೂರಿದರು. ಈ ಜೋಡಿ ವರ್ಷಾಂತ್ಯದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com