ಬೆಂಗಳೂರು: ಕೋಟಿಗೊಬ್ಬ 2 ಸಿನೆಮಾದ ಸುದೀಪ್ ಅವರ ನಟನೆಯನ್ನು ಹೊಗಳಿದ್ದ ರಾಮ್ ಗೋಪಾಲ್ ವರ್ಮಾ, ಸುದೀಪ್ ನಟನೆಯ ಮುಂದೆ ವಿಷ್ಣುವರ್ಧನ್ ಅಪ್ರಬುದ್ಧ ನಟ ಎಂಬ ಮಾತು ಖ್ಯಾತ ಕನ್ನಡ ನಟ ದಿವಂಗತ ವಿಷ್ಣುವರ್ಧನ್ ಅಭಿಮಾನಿಗಳನ್ನು ಕೆರಳಿಸಿತ್ತು. ವಿಷ್ಣುವರ್ಧನ್ ಅಭಿಮಾನಿಗಳ ಸಂಘಗಳು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿ ರಾಮ್ ಗೋಪಾಲ್ ವರ್ಮಾ ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧಿಸುವಂತೆ ಆಗ್ರಹಿದ್ದವು. ಈ ನಡುವೆ ಸುದೀಪ್ ಹೊಸದಾಗಿ ಟ್ವೀಟ್ ಮಾಡಿ ದಂತಕತೆಗಳಾದ ರಜನಿಕಾಂತ್ ಆಗಲಿ ವಿಷ್ಣುವರ್ಧನ್ ಆಗಲಿ ಅವರಿಗೆ ನಾನು ಸರಿಸಮಾನನಲ್ಲ ಎಂದಿದ್ದರು.