

ಚೆನ್ನೈ: ಜೈಲಿನಲ್ಲಿದ್ದುಕೊಂಡು ರೌಡಿಯೊಬ್ಬ ನನಗೆ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾನೆ ಎಂದು ತಮಿಳು ನಟಿ ರಾಧಾ ದೂರಿದ್ದಾರೆ.
ರೌಡಿ ಶೀಟರ್ ವೈರಾಮ್ ಅಲಿಯಾಸ್ ಕುಂದ್ರಾತ್ತೂರ್ ಬುಜ್ಹಾಲ್ ಜೈಲಿನಿಂದ ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾನೆ ಎಂದು ಆಕೆ ದೂರಿದ್ದಾರೆ.
ಎರಡು ಕೊಲೆ ಪ್ರಕರಣ ಸೇರಿ 12 ಕೇಸುಗಳ ಹಿನ್ನೆಲೆಯಲ್ಲಿ 2014 ರಿಂದ ಜೈಲುವಾಸ ಅನುಭವಿಸುತ್ತಿರುವ ವೈರಾಮ್ ಕರೆ ಮಾಡಿ ತಮಗೆ ಬೆದರಿಕೆ ಹಾಕಿರುವ ಆಡಿಯೋವನ್ನು ಪೊಲೀಸರಿಗೆ ನೀಡಲಾಗಿದೆ.
ಆಡಿಯೋದಲ್ಲಿ ತಾನವು ಜೈಲಿನಿಂದಲೇ ಮಾತನಾಡುತ್ತಿರುವುದಾಗಿ ಹೇಳಿದ್ದಾನೆ. ವ್ಯಕ್ತಿಯೊಬ್ಬನಿಂದ ದೂರ ಉಳಿಯುವಂತೆ ಆತ ಬೆದರಿಕೆ ಹಾಕಿದ್ದಾನೆ. ಇತ್ತೀಚೆಗೆ ತನ್ನ ಪತಿಯನ್ನು ರಾಧಾ ಕಿಡ್ನಾಪ್ ಮಾಡಿದ್ದಾರೆಂದು ಮಹಿಳೆಯೊಬ್ಬರು ರಾಧಾ ವಿರುದ್ಧ ದೂರು ದಾಖಲಿಸಿದ್ದರು. ಈ ಸಂಬಂಧ ದಿ ನ್ಯೂಸ್ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿದ ರಾಧಾ ಶನಿವಾರ ಸುಮಾರು ಸಂಜೆ ಆರು ಗಂಟೆ ವೇಳೆಗೆ ಕರೆ ಮಾಡಿದ ಆತ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದ್ದಾರೆ. ಈ ಸಂಬಂಧ ಸೋಮವಾರ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.
ಜೈಲಿನಲ್ಲಿರುವ ಖೈದಿ ಹೇಗೆ ಮೊಬೈಲ್ ಫೋನ್ ಬಳಸಲು ಸಾಧ್ಯ ಎಂದು ಹಿರಿಯ ಅಧಿಕಾರಿಗಳನ್ನು ಪ್ರಶ್ನಿಸಿದಾಗ, ಜೈಲಿನಲ್ಲಿದ್ದುಕೊಂಡು ರೌಡಿಯೊಬ್ಬ ಮೊಬೈಲ್ ಬಳಸುವ ಸಾಧ್ಯತೆ ಇಲ್ಲ ಎಂದು ಹೇಳಿದ್ದಾರೆ. ಇದೇ ವೇಳೆ ತನ್ನ ಪತಿ ವಿರುದ್ಧ ನಟಿ ರಾಧಾ ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ವಯಾರಾಮ್ ಪತ್ನಿ ದೂರು ದಾಖಲಿಸಿದ್ದಾರೆ.