ಕಟ್ಟಪ್ಪ ಬಾಹುಬಲಿ ಕೊಂದಿದ್ದಕ್ಕೆ 4 ಕಾರಣಗಳು?

ಪ್ರೇಕ್ಷಕರ ಈ ಕುತೂಹಲವನ್ನು ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತಷ್ಚು ಹೆಚ್ಚಿಸಲು ನಿರ್ಧರಿಸಿದ್ದು, ಬಾಹುಬಲಿ-2 ಚಿತ್ರದಲ್ಲಿ ನಾಲ್ಕು ಕ್ಲೈಮ್ಯಾಕ್ಸ್ ಗಳನ್ನು ಇಡಲು ನಿರ್ಧರಿಸಿದ್ದಾರಂತೆ.
ಬಾಹುಬಲಿ ಕೊಂದ ಕಟ್ಟಪ್ಪ (ಸಂಗ್ರಹ ಚಿತ್ರ)
ಬಾಹುಬಲಿ ಕೊಂದ ಕಟ್ಟಪ್ಪ (ಸಂಗ್ರಹ ಚಿತ್ರ)
Updated on: 

ಹೈದರಾಬಾದ್: ಎಸ್ ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ-2 ಚಿತ್ರದ ನಿರೀಕ್ಷೆಗಳು ದಿನಗಳದಂತೆ ಹೆಚ್ಚಾಗುತ್ತಿದ್ದು, ತನ್ನ ಮೇಕಿಂಗ್ ನಿಂದ ಗಮನ ಸೆಳೆಯುತ್ತಿದ್ದ ಈ ಚಿತ್ರ ಇದೀಗ ತನ್ನ ಕಥೆಯಿಂದಲೂ ಪ್ರೇಕ್ಷಕರನ್ನು ತುದಿಗಾಲಲ್ಲಿ ನಿಲ್ಲುವಂತೆ ಮಾಡಿದೆ.

ಪ್ರೇಕ್ಷಕರ ಈ ಕುತೂಹಲವನ್ನು ನಿರ್ದೇಶಕ ಎಸ್ ಎಸ್ ರಾಜಮೌಳಿ ಮತ್ತಷ್ಚು ಹೆಚ್ಚಿಸಲು ನಿರ್ಧರಿಸಿದ್ದು, ಬಾಹುಬಲಿ-2 ಚಿತ್ರದಲ್ಲಿ ನಾಲ್ಕು ಕ್ಲೈಮ್ಯಾಕ್ಸ್ ಗಳನ್ನು ಇಡಲು ನಿರ್ಧರಿಸಿದ್ದಾರಂತೆ. ಈ  ಕುರಿತು ಈಗಾಗಲೇ ಫಿಲ್ಮ್ ನಗರದಲ್ಲಿ ಭಾರಿ ಚರ್ಚೆಗಳು ನಡೆಯುತ್ತಿದ್ದು, ಮೊದಲ ಚಿತ್ರದ ಅಂತಿಮ ಭಾಗದಲ್ಲಿ ರಾಜ ಅಮರೇಂದ್ರ ಬಾಹುಬಲಿ ತನ್ನ ಆಪ್ತ ಕಟ್ಟಪ್ಪನಿಂದಲೇ ಹತ್ಯೆಗೀಡಾಗುತ್ತಾನೆ.  ಆದರೆ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆಗೆ ಉತ್ತರ ಮಾತ್ರ ದೊರೆಯುವುದಿಲ್ಲ.

ಬಾಹುಬಲಿ-2 ಚಿತ್ರದಲ್ಲಿ ನಿರ್ದೇಶಕ ರಾಜಮೌಳಿ ಇದಕ್ಕೆ ನಾಲ್ಕು ದೃಷ್ಟಿಕೋನಗಳ ಉತ್ತರ ನೀಡಲು ಹೊರಟಿದ್ದು, ಇದಕ್ಕಾಗಿ ಚಿತ್ರದ ಕಥೆಯಲ್ಲಿ ಅಲ್ಪ ಬದಲಾವಣೆ ಮಾಡಿಕೊಂಡಿದ್ದಾರಂತೆ.  ಚಿತ್ರಕ್ಕೆ ಕಥೆ ಬರೆದಿರುವ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರು, ಬಾಹುಬಲಿ-2 ಚಿತ್ರಕ್ಕಾಗಿ ನಾಲ್ಕು ಬಗೆಯ ಕ್ಲೈಮ್ಯಾಕ್ಸ್ ಸಿದ್ಧಪಡಿಸಿದ್ದಾರಂತೆ. ರಾಜಮೌಳಿ ಹಾಗೂ ವಿಜಯೇಂದ್ರ  ಪ್ರಸಾದ್ ಅವರು ತುಂಬಾ ತಲೆ ಕೆಡಿಸಿಕೊಂಡು ಈ ನಾಲ್ಕು ಕ್ಲೈಮ್ಯಾಕ್ಸ್ ಗಳನ್ನು ಬರೆದಿದ್ದಾರಂತೆ.

ಮೂವರಿಗೆ ಮಾತ್ರಗೊತ್ತು ಈ ವಿಶಿಷ್ಟ ಕ್ಲೈಮಾಕ್ಸ್ ರಹಸ್ಯ
ಬಾಹುಬಲಿ ಚಿತ್ರ ಆರಂಭವಾದಾಗಿನಿಂದಲೂ ಚಿತ್ರದ ಕಥೆಯನ್ನು ತೀರಾ ರಹಸ್ಯವಾಗಿಟ್ಟಿರುವ ನಿರ್ದೇಶಕ ರಾಜಮೌಳಿ ಬಾಹುಬಲಿ-2 ಚಿತ್ರದ ಕಥೆಯನ್ನೂ ಕೂಡ ಅಷ್ಟೇ ಗೌಪ್ಯವಾಗಿರಿಸಿದ್ದಾರಂತೆ.  ಅವರ ಗೌಪ್ಯತೆ ಹೇಗಿದೆ ಎಂದರೆ ಚಿತ್ರದ ಕ್ಲೈಮ್ಯಾಕ್ಸ್ ರಹಸ್ಯ ಸ್ವತಃ ಆ ಚಿತ್ರದಲ್ಲಿ ಅಭಿನಯಿಸುತ್ತಿರುವ ತಮನ್ನಾ, ಅನುಷ್ಕಾ, ರಾಣಾ ದಗ್ಗುಬಾಟಿ ಅವರಿಗೆ ತಿಳಿದಿಲ್ಲವಂತೆ. ಆದರೆ ಇಡೀ  ಚಿತ್ರತಂಡದ ಪೈಕಿ ಬಾಹುಬಲಿ-2 ಚಿತ್ರದ ಕ್ಲೈಮ್ಯಾಕ್ಸ್ ರಹಸ್ಯ ಮೂವರಿಗೆ ಮಾತ್ರ ತಿಳಿದಿದೆಯಂತೆ. ನಿರ್ದೇಶಕ ರಾಜಮೌಳಿ, ನಟ ಪ್ರಭಾಸ್ ಹಾಗೂ ಕಟ್ಟಪ್ಪ ಪಾತ್ರದಾರಿ ಸತ್ಯರಾಜ್ ಅವರಿಗೆ  ಮಾತ್ರ ತಿಳಿದಿದೆಯಂತೆ.

ಫಿಲ್ಮ್ ನಗರದಲ್ಲಿ ಹರಿಯುತ್ತಿರುವ ಮತ್ತೊಂದು ಸುದ್ದಿ ಎಂದರೆ, ರಾಜಮೌಳಿ ಚಿತ್ರೀಕರಿಸುತ್ತಿರುವ ಈ ನಾಲ್ಕು ಕ್ಲೈಮ್ಯಾಕ್ಸ್ ಗಳಲ್ಲಿ ಗೊಂದಲ ಉಂಟಾದರೆ ಒಂದನ್ನು ಮಾತ್ರ ತೆರೆಗೆ ತಂದು ಉಳಿದ ಮೂರು ಕ್ಲೈಮ್ಯಾಕ್ಸ್ ಗಳನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡವುದಕ್ಕೂ ರಾಜಮೌಳಿ ಯೋಜಿಸಿದ್ದಾರಂತೆ.

ರಾಜಮೌಳಿ ಪ್ರಚಾರದ ಗಿಮಿಕ್?
ಇನ್ನು ಬಾಹುಬಲಿ-2 ಚಿತ್ರದ ಕ್ಲೈಮ್ಯಾಕ್ಸ್ ಕುರಿತು ಈ ಸುದ್ದಿ ಹಲವು ಟೀಕೆಗಳಿಗೂ ಗುರಿಯಾಗಿದ್ದು, ನಿರ್ದೇಶಕ ರಾಜಮೌಳಿ ಅವರ ಪ್ರಚಾರದ ಗಿಮಿಕ್ ಇದು ಹಲವರು ಟೀಕಿಸಿದ್ದಾರೆ. ಮೂಲಗಳ  ಪ್ರಕಾರ ಬಾಹುಬಲಿ-2 ಚಿತ್ರದ ಪ್ರಮುಖ ಅಂಶಗಳಲ್ಲಿ ಒಂದಾದ ಅನುಷ್ಕಾ ಅಭಿನಯದ ದೇವಸೇನಾ ಪಾತ್ರಕ್ಕಿಂತ, ತಮನ್ನಾ ಅಭಿನಯದ ಆವಂತಿಕಾ ಪಾತ್ರಕ್ಕೆ ಹೆಚ್ಚಿನ ಮಹತ್ವ ನೀಡಿದ್ದಾರಂತೆ.  ಹೀಗಾಗಿ ದೇವಸೇನಾ ಪಾತ್ರದ ದೃಶ್ಯಗಳಿಗೆ ಕತ್ತರಿ ಹಾಕಿ ಆವಂತಿಕಾ ಪಾತ್ರದ ದೃಶ್ಯಗಳನ್ನು ಸೇರಿಸಿದ್ದಾರಂತೆ. ಹೀಗಾಗಿ ಅನುಷ್ಕಾ ಅಭಿಮಾನಿಗಳು ರಾಜಮೌಳಿ ವಿರುದ್ಧ ಬೇಸರ  ಮಾಡಿಕೊಂಡಿದ್ದಾರಂತೆ ಎಂಬ ವದಂತಿಗಳು ಹರಿದಾಡುತ್ತಿತ್ತು. ಈ ವದಂತಿ ಕುರಿತ ಸುದ್ದಿಗಳನ್ನು ಮರೆ ಮಾಚಿಸಲು ಹಾಗೂ ಆ ಒತ್ತಡದಿಂದ ಪಾರಾಗಲು ರಾಜಮೌಳಿ ನಾಲ್ಕು ಕ್ಲೈಮ್ಯಾಕ್ಸ್ ಎಂಬ  ಸುದ್ದಿಯನ್ನು ಹರಿಬಿಟ್ಟಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com