ಜನವರಿ 29 ಕ್ಕೆ ಸಮಂತಾ-ನಾಗಚೈತನ್ಯ ನಿಶ್ಚಿತಾರ್ಥ?

2009 ರಿಂದ ಡೇಟಿಂಗ್ ನಡೆಸುತ್ತಿರುವ ಟಾಲಿವುಡ್ ಪ್ರಖ್ಯಾತ ಜೋಡಿ ನಾಗ ಚೈತನ್ಯ ಮತ್ತು ಸಮಂತಾ ಜನವರಿ 29 ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ...
ನಾಗ ಚೈತನ್ಯ ಮತ್ತು ಸಮಂತಾ
ನಾಗ ಚೈತನ್ಯ ಮತ್ತು ಸಮಂತಾ

ಹೈದರಾಬಾದ್: 2009 ರಿಂದ ಡೇಟಿಂಗ್ ನಡೆಸುತ್ತಿರುವ ಟಾಲಿವುಡ್ ಪ್ರಖ್ಯಾತ ಜೋಡಿ ನಾಗ ಚೈತನ್ಯ ಮತ್ತು ಸಮಂತಾ ಜನವರಿ 29 ರಂದು ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ,

ನಾಗಚೈತನ್ಯ ಮತ್ತು ಸಮಂತಾ ವಿವಾಹದ ಬಗ್ಗೆ ಪ್ರತಿಯೊಬ್ಬರಿಗೂ ಕುತೂಹಲ ಹೆಚ್ಚಿದ್ದು, ಈ ಸಂಬಂಧ ಸಿಟಿ ಎಕ್ಸ್ ಪ್ರೆಸ್ ನಾಗ ಚೈತನ್ಯರನ್ನು ಸಂಪರ್ಕಿಸಿದಾಗ, ಮುಂದಿನ ವರ್ಷ ನಮ್ಮ ವಿವಾಹ ನೇರವೇರುತ್ತದೆ ವಿವಾಹದ ದಿನಾಂಕ ಅಂತಿಮಗೊಂಡ ನಂತರ ನಮ್ಮ ತಂದೆ ಪ್ರಕಟಿಸುತ್ತಾರೆ ನಾನು ಮತ್ತೇನು ಹೆಚ್ಚಿನ ವಿವರ ನೀಡಲಾರೆ ಎಂದು ಹೇಳಿದ್ದಾರೆ.

ನಿಶ್ಚಿತಾರ್ಥದ ದಿನಾಂಕದ ಬಗ್ಗೆ ನಾಗ ಚೈತನ್ಯ ಆಗಲಿ, ಸಮಂತಾ ಆಗಲಿ ಎಲ್ಲಿಯೂ ಅಧಿಕೃತವಾಗಿ ಹೇಳಿಲ್ಲ, ಈ ತಿಂಗಳ ಮೊದಲ ವಾರದಲ್ಲಿ ಚೈತನ್ಯ ಸಹೋದರ ಅಖಿಲ್ ಅಕ್ಕಿನೇನಿ ತನ್ನ ಗೆಳತಿ ಶ್ರೀಯಾ ಭೂಪಾಲ್  ಜೊತೆ ಹೈದರಾಬಾದ್ ನಲ್ಲಿ ತಮ್ಮ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com