ನನ್ನ ಶಬ್ದಕೋಶದಲ್ಲಿ ನಿರೀಕ್ಷೆ ಮತ್ತು ಉತ್ಸಾಹಗಳು ಇನ್ನು ಉಳಿದಿಲ್ಲ: ರಿಷಬ್ ಶೆಟ್ಟಿ

ಬಹುನಿರೀಕ್ಷಿತ ಚಲನಚಿತ್ರ 'ಕಿರಿಕ್ ಪಾರ್ಟಿ' ನಾಳೆ ಬಿಡುಗಡೆಗೆ ಸಿದ್ಧವಾಗಿದೆ. ಈ ಭಯಕ್ಕೆ ನಿರ್ದೇಶಕ ರಿಷಬ್ ಶೆಟ್ಟಿ ನಿದ್ದೆ ಕಳೆದುಕೊಂಡಿರಬಹುದೇ ಎಂದು ಊಹಿಸಿದರೆ ಕಥೆ ಬೇರೆಯೇ ಇದೆ. "ನಿರೀಕ್ಷೆ ಮತ್ತು ಉತ್ಸಾಹ
ನಿರ್ದೇಶಕ ರಿಷಬ್ ಶೆಟ್ಟಿ
ನಿರ್ದೇಶಕ ರಿಷಬ್ ಶೆಟ್ಟಿ
Updated on: 
ಬೆಂಗಳೂರು: ಬಹುನಿರೀಕ್ಷಿತ ಚಲನಚಿತ್ರ 'ಕಿರಿಕ್ ಪಾರ್ಟಿ' ನಾಳೆ ಬಿಡುಗಡೆಗೆ ಸಿದ್ಧವಾಗಿದೆ. ಈ ಭಯಕ್ಕೆ ನಿರ್ದೇಶಕ ರಿಷಬ್ ಶೆಟ್ಟಿ ನಿದ್ದೆ ಕಳೆದುಕೊಂಡಿರಬಹುದೇ ಎಂದು ಊಹಿಸಿದರೆ ಕಥೆ ಬೇರೆಯೇ ಇದೆ. "ನಿರೀಕ್ಷೆ ಮತ್ತು ಉತ್ಸಾಹ ನನ್ನ ಶಬ್ದಕೋಶದಲ್ಲಿ ಉಳಿದಿಲ್ಲ. ನಾನು ಹಲವು ಅಡೆತಡೆಗಳ ನಂತರ ಈ ಹಂತಕ್ಕೆ ಬಂದಿದ್ದೇನೆ, ಆದುದರಿಂದ ಈ ಸಂಗತಿಗಳು ನನಗೆ ಹೆಚ್ಚು ಕಾಡುವುದಿಲ್ಲ. 'ಕಿರಿಕ್ ಪಾರ್ಟಿ' ಹಾಡುಗಳು ಮತ್ತು ಟ್ರೇಲರ್ ಜನರ ಮಧ್ಯೆ ಕುತೂಹಲ ಕೆರಳಿಸಿರುವುದನ್ನು ನೋಡಿದರೆ, ಸಿನೆಮಾವನ್ನು ಜನ ಅಷ್ಟೇ ಕುತೂಹಲದಿಂದ ಸ್ವೀಕರಿಸಲಿದ್ದಾರೆ" ಎಂದು ನಂಬಿದ್ದೇನೆ ಎನ್ನುತ್ತಾರೆ. 
ಸಂಕಲನದ ಮೇಜಿನ ಮೇಲೆ ಕಾಲೇಜು ಕಥೆಗಳು ಬಹಳ ಮಜ ತಂದುಕೊಟ್ಟವು ಎನ್ನುವ ರಿಷಬ್ "ನಾನು ತಂತ್ರಜ್ಞರಾಗಿ, ನಟರಂತೆ ಕಾಲೇಜು ದಿನಗಳ ಚಿತ್ರೀಕರಣವನ್ನು ಅಷ್ಟು ಸವಿಯಲು ಸಾಧ್ಯವಾಗಲಿಲ್ಲ ಏಕೆಂದರೆ ನಮಗೆ ಬಿಡುವೆ ಸಿಗುತ್ತಿರಲಿಲ್ಲ. ಹೀರೊ ಮತ್ತು ಈ ಕಥೆ ಬರೆದಿರುವ ರಕ್ಷಿತ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಹೊರತುಪಡಿಸಿ ಉಳಿದವರೆಲ್ಲ ಹೊಸಬರು. ಅವರನ್ನು ನಿಭಾಯಿಸುವುದು ಕಷ್ಟದ ಕೆಲಸವಾಗಿತ್ತು ಮತ್ತು ಶ್ರಮ ಬೇಡಿತ್ತು. ಆದುದರಿಂದ ಸಂಕಲನದ ಸಮಯದಲ್ಲಿ ನಾನು ಈ ಸಿನೆಮಾವನ್ನು ಆನಂದಿಸಿದೆ" ಎನ್ನುತ್ತಾರೆ. 
ಪರಾಂವಹ್ ಸ್ಟುಡಿಯೋಸ್ ನಿರ್ಮಾಣದ ಈ ಚಿತ್ರ ೧೨೦ ಚಿತ್ರಮಂದಿರಗಳಲ್ಲಿ ಬಿಡುಗಡೆಗೆ ಸಿದ್ಧವಾಗಿದ್ದು, ಎರಡನೇ ವಾರದಲ್ಲಿ ಚಿತ್ರಮಂದಿರಗಳನ್ನು ಹೆಚ್ಚಿಸಿಕೊಳ್ಳುವ ಭರವಸೆ ಹೊಂದಿದ್ದಾರೆ ನಿರ್ದೇಶಕ. 
ರಶ್ಮಿಕಾ ಮಂದಣ್ಣ ಮತ್ತು ಸಂಯುಕ್ತ ಹೆಗಡೆ ನಾಯಕ ನಟಿಯರು. ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದು, ಕರಮ್ ಚಾವ್ಲಾ ಅವರ ಸಿನೆಮ್ಯಾಟೋಗ್ರಫಿ ಇದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com