ಮಾರ್ಚ್ ೪ಕ್ಕೆ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಬಿಡುಗಡೆ

'ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ' ಬಿಡುಗಡೆಯಾದ ಮೂರು ವರ್ಷದ ನಂತರ ಈಗ ಮಾರ್ಚ್ ೪ಕ್ಕೆ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಸಿನೆಮಾ ಬಿಡುಗಡೆಗೆ
'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಸಿನೆಮಾದ ಸ್ಟಿಲ್
'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಸಿನೆಮಾದ ಸ್ಟಿಲ್

ಬೆಂಗಳೂರು: 'ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ' ಬಿಡುಗಡೆಯಾದ ಮೂರು ವರ್ಷದ ನಂತರ ಈಗ ಮಾರ್ಚ್ ೪ಕ್ಕೆ 'ಸಿಂಪಲ್ಲಾಗ್ ಇನ್ನೊಂದ್ ಲವ್ ಸ್ಟೋರಿ' ಸಿನೆಮಾ ಬಿಡುಗಡೆಗೆ ಸಜ್ಜಾಗಿದೆ.

ಬಿಡುಗಡೆಯ ತವಕದಲ್ಲಿರುವ ನಿರ್ದೇಶಕ ಸುನಿ "ಪ್ರಯೋಗಾತ್ಮಕ ಸಿನೆಮಾದ ಮುಂದುವರೆದ ಭಾಗದ ಬಿಡುಗಡೆ ದಿನಾಂಕ ಈ ಸಜ್ಜಾಗಿದೆ. 'ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ', ಸಿನೆಮಾ ನಿರ್ಮಾಣದ ಆರ್ಥಿಕತೆಯನ್ನೇ ಬದಲಿಸಿತ್ತು. ಆ ದೃಷ್ಟಿಯಿಂದ ಅದನ್ನು ಮರುಕಳಿಸಿದ್ದರೂ, ಸ್ಕ್ರಿಪ್ಟ್, ತಾರಾ ಗಣದ ಆಯ್ಕೆ ದೃಷ್ಟಿಯಿಂದ ಹೊಸ ಸಿನೆಮಾ ಸಂಪೂರ್ಣ ಬದಲಾಗಿದೆ" ಎನ್ನುತ್ತಾರೆ.

"ಹಿಂದಿನ ಸಿನೆಮಾ ಬಿಡುಗಡೆಯಾದ ವಾರದಲ್ಲೇ ಈ ಸಿನೆಮಾ ಬಿಡುಗಡೆಯಾಗುತ್ತಿದೆ ಹಾಗೆಯೇ ಹಿಂದಿನ ಸಿನೆಮಾದ ತಾಜಾತನವನ್ನು ಕೂಡ ಇದು ಉಳಿಸಿಕೊಂಡಿದೆ. ಆ ಸಿನೆಮಾದ ಜೊತೆಗೆ ಇರುವ ಸಂಬಂಧವೆಂದರೆ ಇಡೀ ಸಿನೆಮಾ ಎರಡು ಮುಖ್ಯ ಪಾತ್ರಗಳ ನಡುವೆಯೇ ಸುತ್ತುತ್ತದೆ. ಈ ಸಿನೆಮಾ ಕೂಡ ವಿಶಿಷ್ಟ ಕ್ಲೈಮ್ಯಾಕ್ಸ್ ಹೊಂದಿದ್ದು, ತಾಂತ್ರಿಕವಾಗಿ ಅತ್ಯದ್ಭುತವಾಗಿ ಮೂಡಿ ಬಂದಿದ್ದು, ಸಂಭಾಷಣೆಯಲ್ಲಿ ಕೂಡ ಛಾಪು ಮೂಡಿಸುತ್ತದೆ" ಎನ್ನುತ್ತಾರೆ ಸುನಿ.

ಫೆಬ್ರವರಿ ೧೮ ರಂದು ಆಡಿಯೋ ಬಿಡುಗಡೆ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಪ್ರವೀಣ್ ಮತ್ತು ಮೇಘನಾ ಗಾವೋಂಕರ್ ಮುಖ್ಯ ಭೂಮಿಕೆಯಲ್ಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com