
ಬೆಂಗಳೂರು: ‘ಕೌದಿ’ ಚಿತ್ರದ ಪಾತ್ರಕ್ಕಾಗಿ ಘೋಷಣೆ ಮಾಡಲಾಗಿದ್ದ ‘ಅತ್ಯುತ್ತಮ ಪೋಷಕ ನಟಿ’ ಪ್ರಶಸ್ತಿಯನ್ನು ಹಿರಿಯ ನಟಿ ಬಿ. ಜಯಶ್ರೀ ಅವರು ಭಾನುವಾರ ತಿರಸ್ಕರಿಸಿದ್ದಾರೆ.
ಪ್ರಶಸ್ತಿಗೆ ಭಾಜನವಾದ ‘ಕೌದಿ’ ಚಿತ್ರದಲ್ಲಿ ತಮ್ಮದ ಪ್ರಧಾನ ಪಾತ್ರವಾಗಿದ್ದು, ಅದು ಪೋಷಕ ನಟಿಯ ಪಾತ್ರವಲ್ಲ. ಹೀಗಾಗಿ ‘ಪೋಷಕ ನಟಿ’ ಪ್ರಶಸ್ತಿ ಸ್ವೀಕರಿಸುವುದರಿಂದ ಆ ಪಾತ್ರಕ್ಕೆ ಅನ್ಯಾಯ ಮಾಡುವುದರ ಜೊತೆಗೆ ಬೇರೆ ಉತ್ತಮ ಪೋಷಕ ನಟಿಗೂ ಅನ್ಯಾಯ ಮಾಡಿದಂತಾಗುತ್ತದೆ’ ಎಂದು ಹೇಳಿ ಬಿ. ಜಯಶ್ರೀ ಅವರು ಪ್ರಶಸ್ತಿಯನ್ನು ತಿರಸ್ಕರಿಸಿದ್ದಾರೆ ಎಂದು ತಿಳಿದುಬಂದಿದೆ.
‘ನಾನು ಪ್ರಶಸ್ತಿಗಾಗಿ ನಟನೆ ಮಾಡಿಲ್ಲ. ಆದ್ದರಿಂದ ಈ ಬಗ್ಗೆ ತಪ್ಪು ತಿಳಿಯಬೇಕಿಲ್ಲ. ಚಿತ್ರದಲ್ಲಿ ತಮ್ಮ ಪಾತ್ರ ಪೋಷಕ ನಟಿಯ ಪಾತ್ರವಲ್ಲ. ಅದು ಚಿತ್ರದ ಪ್ರಧಾನ ಪಾತ್ರವಾಗಿತ್ತು. ಆ ಪಾತ್ರಕ್ಕೆ ನ್ಯಾಯ ಒದಗಿಸಲು ನಾನು ಪ್ರಯತ್ನಿಸಿದ್ದೇನೆ. ‘ಪೋಷಕ ನಟಿ’ ಪ್ರಶಸ್ತಿ ಸ್ವೀಕರಿಸುವುದರಿಂದ ಆ ಪಾತ್ರಕ್ಕೆ ಅನ್ಯಾಯ ಮಾಡುವುದರ ಜೊತೆಗೆ ಬೇರೆ ಉತ್ತಮ ಪೋಷಕ ನಟಿಗೂ ಅನ್ಯಾಯ ಮಾಡಿದಂತಾಗುತ್ತದೆ. ರಾಜ್ಯ ಸರ್ಕಾರದ ಈ ಪ್ರಶಸ್ತಿ ಸ್ವೀಕರಿಸುವುದರಿಂದ ನಾನು ಪಾತ್ರಕ್ಕೆ ಅನ್ಯಾಯ ಮಾಡಿದಂತಾಗುತ್ತದೆ. ಆದ್ದರಿಂದ ವಿಷಾದ ಪೂರ್ವಕವಾಗಿ ಈ ಪ್ರಶಸ್ತಿಯನ್ನು ತಿರಸ್ಕರಿಸಿದ್ದೇನೆ’ ಎಂದು ಜಯಶ್ರೀ ಅವರು ಮಾಧ್ಯಮಗಳಿಗೆ ಹೇಳಿದ್ದಾರೆ.
ಜಯಶ್ರೀ ಅವರ ಈ ದಿಢೀರ್ ನಿರ್ಧಾರ ಇದೀಗ ಸಿನಿಮಾ ಮತ್ತು ಸಾಹಿತ್ಯ ವಲಯದಲ್ಲಿ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಚಿತ್ರದ ಟ್ರೈಲರ್ ಗಾಗಿ ಇಲ್ಲಿ ಕ್ಲಿಕ್ ಮಾಡಿ
Advertisement