ಮತ್ತೆ ಗಣೇಶ್ ಸೂಪರ್ ಮಿನಟ್; ಭಾಗವಹಿಸಲು ಸರ್ವರಿಗೂ ಅವಕಾಶ

ನೀವು ೬೦ ಸೆಕಂಡ್ ಗಳ ಸವಾಲಿಗೆ ಸಿದ್ಧರೇ? ಹೌದು ನಟ ಗಣೇಶ್ ಕಿರುತೆರೆಯಲ್ಲಿ ನಡೆಸಿಕೊಡುತ್ತಿದ್ದ ಸೂಪರ್ ಮಿನಟ್ ಎರಡನೇ ಆವೃತ್ತಿಗೆ ಅಣಿಯಾಗುತ್ತಿದೆ.
ನಟ ಗಣೇಶ್
ನಟ ಗಣೇಶ್
Updated on: 

ಬೆಂಗಳೂರು: ನೀವು ೬೦ ಸೆಕಂಡ್ ಗಳ ಸವಾಲಿಗೆ ಸಿದ್ಧರೇ? ಹೌದು ನಟ ಗಣೇಶ್ ಕಿರುತೆರೆಯಲ್ಲಿ ನಡೆಸಿಕೊಡುತ್ತಿದ್ದ ಸೂಪರ್ ಮಿನಟ್ ಎರಡನೇ ಆವೃತ್ತಿಗೆ ಅಣಿಯಾಗುತ್ತಿದೆ. ಇದು ಫೆಬ್ರವರಿಯಿಂದ ಪ್ರಾರಂಭವಾಗಲಿದೆ. "ಕಿರುತೆರೆ ನನಗೆ ಯಾವಗಲೂ ಅಧ್ಬುತ ಅನುಭವ. ಈಗ ಈ ರಿಯಾಲಿಟಿ ಗೇಂ ಶೋನ ಎರಡನೇ ಆವೃತ್ತಿಗೆ ಹಿಂದಿರುಗುವುದಕ್ಕೆ ಖುಷಿಯಾಗಿದ್ದೇನೆ. ಕ್ಷಣಗಣನೆ ಪ್ರಾರಂಭವಾಗಿದ್ದು ಈ ಕುತೂಹಲಕಾರಿ ಗೇಂ ಶೋಗೆ ಎದುರುನೋಡುತ್ತಿದ್ದೇನೆ" ಎನ್ನುತ್ತಾರೆ ನಟ ಗಣೇಶ್.

ಟಿವಿ ವಾಹಿನಿಯ ಮೂಲಗಳ ಪ್ರಕಾರ ಕಳೆದ ಬಾರಿಯಂತೆ ಈ ಆವೃತ್ತಿಗೆ ಕೇವಲ ತಾರೆಯರಷ್ಟೇ ಬರದೆ ಸಾಮಾನ್ಯರಿಗೂ ಅವಕಾಶ ಕಲ್ಪಿಸಲಾಗಿದ್ದು, ಅದಕ್ಕಾಗಿ ಫೋಟೋ ಶೂಟ್ ನಡೆಯಲಿದೆಯಂತೆ. "ತಾರೆಯರನ್ನು ಕರೆತರಲಾಗುವುದು. ಆದರೆ ಗಣೇಶ್ ಅವರಿಗೆ ಅಪಾರ ಅಭಿಮಾನಿಗಳು ಇರುವುದರಿಂದ ಅವರಿಗೂ ನಟನ ಜೊತೆ ಆಟ ಆಡುವುದಕ್ಕೆ ಕಾರ್ಯಕ್ರಮದಲ್ಲಿ ಅವಕಾಶ ಕಲ್ಪಿಸಿಕೊಡಲಾಗುವುದು" ಎಂದು ಮೂಲಗಳು ತಿಳಿಸಿವೆ.

ವಿದೇಶಿ ವಾಹಿನಿಯ ಕಾರ್ಯಕ್ರಮ 'ಮಿನಟ್ ಟು ವಿನ್' ಕಾರ್ಯಕ್ರಮದ ಅವತರಿಣಿಕೆ 'ಸೂಪರ್ ಮಿನಟ್'.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com