ರಾಷ್ಟ್ರಧ್ವಜ, ರಾಷ್ಟ್ರಪ್ರೇಮದ ಕುರಿತು ಸಂದೇಶ ಸಾರುವ ಕನ್ನಡದ 22 ಜುಲೈ 1947 ಚಿತ್ರದ ಟ್ರೈಲರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಲಾಂಚ್ ಮಾಡಿ, ಚಿತ್ರ ತಂಡಕ್ಕೆ ಶುಭ ಕೋರಿದರು.
ಪ್ರಧಾನಿ ನರೇಂದ್ರ ಮೋದಿ ಬ್ಯುಸಿ ಶೆಡ್ಯೂಲ್ ನಲ್ಲೂ ನಿನ್ನೆ ತಮ್ಮ ಕಚೇರಿಯಲ್ಲಿ ಚಿತ್ರದ ಟ್ರೈಲರ್ ಲಾಂಚ್ ಮಾಡಿದ್ದಾರೆ. ನಿರ್ದೇಶಕ ವಿಶಾಲ್ ರಾಜ್, ನಿರ್ಮಾಪಕ ನಂಜೇಗೌಡ, ಹಿರಿಯ ನಟಿ ಸುಧಾರಾಣಿ, ಸಂಗೀತ ಕಟ್ಟಿಮನಿ ಮತ್ತಿತ್ತರರನ್ನು ಒಳಗೊಂಡ ಚಿತ್ರ ತಂಡ ಪ್ರಧಾನಿ ಮೋದಿ ಅವರ ಕಚೇರಿಗೆ ಭೇಟಿ ನೀಡಿತ್ತು.
ಇನ್ನು ಚಿತ್ರದ ಟ್ರೈಲರ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಬಿಡುಗಡೆ ಮಾಡಿರುವುದು ಸಮಸ್ತ ಕನ್ನಡಿಗರಿಗೆ ಹಾಗೂ ಸ್ಯಾಂಡಲ್ ವುಡ್ ಗೆ ಹೆಮ್ಮೆಯ ವಿಷಯವಾಗಿದೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಚಿತ್ರದಲ್ಲಿ ಸುಚೇಂದ್ರ ಪ್ರಸಾದ್, ಅಚ್ಯುತ್ ಕುಮಾರ್, ಸುಧಾರಾಣಿ, ನಂಜೇಗೌಡ, ಶೋಭ್ ರಾಜ್, ಲಯ ಕೋಕಿಲ, ಸತೀಶ್ ಮತ್ತಿತ್ತರರು ಅಭಿನಯಿಸಿದ್ದಾರೆ.