ಮತ್ತೆ ತೆರೆಯ ಮೇಲೆ ಒಂದಾಗಲಿರುವ 'ಶಿವಾಜಿನಗರ'ದ ಜೋಡಿ?

ಪಿ ಎಸ್ ಸತ್ಯ ನಿರ್ದೇಶಕನದ 'ಶಿವಾಜಿನಗರ' ಸಿನೆಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ದುನಿಯಾ ವಿಜಯ್ ಮತ್ತು ಪರುಲ್ ಯಾದವ್, ಮೂಲಗಳ ಪ್ರಕಾರ ಓಂ ಪ್ರಕಾಶ್ ರಾವ್ ನಿರ್ದೇಶನದ
'ಶಿವಾಜಿನಗರ' ಸಿನೆಮಾದಲ್ಲಿ ದುನಿಯಾ ವಿಜಯ್-ಪರುಲ್ ಯಾದವ್ ಜೋಡಿ
'ಶಿವಾಜಿನಗರ' ಸಿನೆಮಾದಲ್ಲಿ ದುನಿಯಾ ವಿಜಯ್-ಪರುಲ್ ಯಾದವ್ ಜೋಡಿ
Updated on

ಬೆಂಗಳೂರು: ಪಿ ಎಸ್ ಸತ್ಯ ನಿರ್ದೇಶಕನದ 'ಶಿವಾಜಿನಗರ' ಸಿನೆಮಾದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದ ದುನಿಯಾ ವಿಜಯ್ ಮತ್ತು ಪರುಲ್ ಯಾದವ್, ಮೂಲಗಳ ಪ್ರಕಾರ ಓಂ ಪ್ರಕಾಶ್ ರಾವ್ ನಿರ್ದೇಶನದ ಸಿನೆಮಾವೊಂದರಲ್ಲಿ ಮತ್ತೆ ಒಟ್ಟಾಗಲಿದ್ದಾರೆ. 'ಕಿಲ್ಲಿಂಗ್ ವೀರಪ್ಪನ್' ಸಿನೆಮಾದ ನಿರ್ಮಾಪಕರಲ್ಲಿ ಒಬ್ಬರಾದ ಸುಧೀಂದ್ರ ಈ ಸಿನೆಮಾವನ್ನು ನಿರ್ಮಿಸಲಿದ್ದಾರೆ ಎನ್ನುತ್ತವೆ ಮೂಲಗಳು.

"ಯಾವುದೂ ಅಧಿಕೃತವಾಗಿ ಘೋಷಣೆಯಾಗಿಲ್ಲ ಆದರೆ ವಿಜಯ್ ಮತ್ತು ಓಂ ಪ್ರಕಾಶ್ ರಾವ್ ಯೋಜನೆಯೊಂದರೆ ಮೇಲೆ ಕೆಲಸ ಮಾಡುತ್ತಿರುವುದು ನಿಜ ಮತ್ತು ಪರುಲ್ ಯಾದವ್ ಆ ತಂಡ ಸೇರಲಿದ್ದಾರೆ. ಆಗಸ್ಟ್ ೭ ರಿಂದ ಚಿತ್ರೀಕರಣ ಪ್ರಾರಂಭವಾಗಲಿದೆ" ಎನ್ನುತ್ತವೆ ಮೂಲಗಳು.

'ಜೆಸ್ಸಿ' ನಂತರ ಮುಂದಿನ ಯೋಜನೆಗೆ ಸಹಿ ಹಾಕಲು ಕಾಯುತ್ತಿದ್ದ ನಟಿ ಈಗ ವಿಜಯ್ ಜೊತೆಗೆ ನಟಿಸಲು ಒಪ್ಪಿದ್ದರಂತೆ. ರಾಮ್ ಗೋಪಾಲ್ ವರ್ಮ ಅವರ 'ಕಿಲ್ಲಿಂಗ್ ವೀರಪ್ಪನ್'ನಲ್ಲೂ ಅವರು ಕಾಣಿಸಿಕೊಂಡಿದ್ದರು.

ಹಲವಾರು ಸಿನೆಮಾಗಳಲ್ಲಿ ನಿರತರಾಗಿರುವ ವಿಜಯ್ ಯೋಗರಾಜ್ ಭಟ್ ನಿರ್ದೇಶನದ 'ದನ ಕಾಯೋನು' ಸಿನೆಮಾದ ಬಿಡುಗಡೆಗ ಕಾಯುತ್ತಿದ್ದಾರೆ. ಸದ್ಯಕ್ಕೆ ನಾಗಶೇಖರ್ ನಿರ್ದೇಶನದ 'ಮಾಸ್ತಿ ಗುಡಿ' ಸಿನೆಮಾದಲ್ಲೂ ತೊಡಗಿಸಿಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com