

ಬೆಂಗಳೂರು: ರಂಗಿತರಂಗ ಚಿತ್ರದ ನಟ ನಿರೂಪ್ ಭಂಡಾರಿ ಸದ್ದಿಲ್ಲದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಸಾಂಸ್ಕೃತಿಕ ನಗರಿ ಮೈಸೂರು ಮೂಲದ ಯುವತಿ ಧನ್ಯಾ ಅವರ ಜೊತೆ ವಿವಾಹ ಬಂಧನಕ್ಕೊಳಗಾಗಿದ್ದಾರೆ.
ರಂಗಿತರಂಗ ಚಿತ್ರದ ಮೂಲಕ ಚಿರಪರಿಚಿತರಾಗಿದ್ದ ಮಂಗಳೂರು ಮೂಲದ ನಟ ನಿರೂಪ್ ಭಂಡಾರಿ ಮೈಸೂರಿನ ಖಾಸಗಿ ಕಲ್ಯಾಣ ಮಂಟಪದಲ್ಲಿ ನಿನ್ನೆ ದಾಂಪತ್ಯಕ್ಕೆ ಕಾಲಿಟ್ಟಿದ್ದಾರೆ. ಮೈಸೂರು ಮೂಲದ ಧನ್ಯಾ ಎಂಬ ಹುಡುಗಿ ಕೈ ಹಿಡಿದಿರುವ ನಿರೂಪ್ ಭಂಡಾರಿ ತಮ್ಮ ಬ್ಯಾಚುಲರ್ ಜೀವನಕ್ಕೆ ಗುಡ್‌ಬೈ ಹೇಳಿದ್ದಾರೆ.
ನಿರೂಪ್ ಭಂಡಾರಿಯವರ ಮದುವೆ ಸಮಾರಂಭಕ್ಕೆ ಸಿನಿಮಾ ಇಂಡಸ್ಟ್ರಿಯ ಕೆಲವೇ ಮಂದಿಯನ್ನು ಆಹ್ವಾನಿಸಲಾಗಿತ್ತು. ಡೈಲಾಗ್ ಕಿಂಗ್ ರಾಘವೇಂದ್ರ ರಾಜ್ ಕುಮಾರ್ ಪುತ್ರ ವಿನಯ್ ರಾಜ್, ಸಾಯಿಕುಮಾರ್ ಸೇರಿದಂತೆ ಚಿತ್ರರಂಗದ ಹಲವು ಗಣ್ಯರು ಆಗಮಿಸಿ ನವದಂಪತಿಗೆ ಶುಭ ಕೋರಿದ್ದು ಮಾತ್ರವಲ್ಲದೆ ಶಾಸಕರು ಸೇರಿದಂತೆ ಹಲವು ಗಣ್ಯರು ಶುಭ ಹಾರೈಸಿದರು.