ಯೂಟ್ಯೂಬ್ ನಲ್ಲಿ ರಜನಿಕಾಂತ್ ಹವಾ, ಕಬಾಲಿ ಚಿತ್ರದ ಟೀಸರ್ ಗೆ ಭರ್ಜರಿ ರೆಸ್ಪಾನ್ಸ್

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರದ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಪಂಚದಾದ್ಯಂತ...
ರಜನಿಕಾಂತ್
ರಜನಿಕಾಂತ್
Updated on: 

ದಕ್ಷಿಣ ಭಾರತದ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಕಬಾಲಿ ಚಿತ್ರದ ಟೀಸರ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಪ್ರಪಂಚದಾದ್ಯಂತ ವೈರಲ್ ಆಗಿದೆ. ಬಿಡುಗಡೆಯಾದ ಒಂದು ಗಂಟೆಯೊಳಗೆ ಒಂದು ಲಕ್ಷ ಲೈಕ್ ಪಡೆದು ಹೊಸ ಹವಾ ಕ್ರಿಯೆಟ್ ಮಾಡುತ್ತಿದೆ.

ಭಾನುವಾರ 11 ಗಂಟೆಗೆ ನಿರ್ಮಾಪಕ ಕಲೈಪ್ಪುಲಿ ಎಸ್ ತನು ಯೂಟ್ಯೂಬ್‌ಗೆ ಕಬಾಲಿ ಟೀಸರ್ ಬಿಡುಗಡೆ ಮಾಡಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಬಿಡುಗಡೆಗೊಂಡ 22 ಗಂಟೆಗಳೊಳಗೆ ನಾಲ್ಕು ಮಿಲಿಯನ್(40 ಲಕ್ಷ) ಜನ ವೀಕ್ಷಿಸಿದ್ದು, ಎರಡು ಲಕ್ಷ ಲೈಕ್ಸ್ ಸಿಕ್ಕಿದೆ.

ರಜನಿ ಪವರ್ ಅಂದ್ರೆ ಇದೇ ನೋಡಿ ಅಂತಾ ಮಾತಾಡ್ತಿದ್ದಾರೆ ಜನ. ಕಬಾಲಿ ಒಂದು ಪಕ್ಕಾ ರಜನಿ ಸ್ಟೈಲ್ ಸಿನಿಮಾ. ರಜನಿ ಡೈಲಾಗ್, ಸ್ಟೈಲ್, ಮ್ಯಾನರಿಸಂ ಎಲ್ಲವನ್ನೂ ಇದರಲ್ಲಿ ಅತ್ಯುತ್ತಮವಾಗಿ ಬಳಸಿಕೊಳ್ಳಲಾಗಿದೆ. ಇನ್ನು ಚಿತ್ರದಲ್ಲಿ ಕನ್ನಡದ ಕಿಶೋರ್, ರಾಧಿಕ ಆಪ್ಟೆ, ದನ್ಷಿಕ, ಕಲೈರಸ್, ದಿನೇಶ್ ಮತ್ತು ಜಾನ್ ವಿಜಯ್ ನಟಿಸಿದ್ದಾರೆ. ಚಿತ್ರವನ್ನು ಪಾ ರಂಜಿತ್ ನಿರ್ದೇಶಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com