ಈಗ ಅವರು ಡಾ. ಪೂಜಾ ಗಾಂಧಿ

ಕನ್ನಡ ಸಿನಿಮಾರಂಗಕ್ಕೆ ಸಲ್ಲಿಸಿರುವ ಸೇವೆಗಾಗಿ ಪೂಜಾ ಗಾಂಧಿ ಗೌರವ ಡಾಕ್ಟರೆಟ್ ಪಡೆಯಲಿದ್ದಾರೆ. ತಮಿಳು ಚಿತ್ರರಂಗದಲ್ಲಿ 'ಕೊಕ್ಕಿ' ಸಿನೆಮಾದ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಪೂಜಾ ಗಾಂಧಿ,
ಪೂಜಾ ಗಾಂಧಿ
ಪೂಜಾ ಗಾಂಧಿ
Updated on
ಬೆಂಗಳೂರು: ಕನ್ನಡ ಸಿನಿಮಾರಂಗಕ್ಕೆ ಸಲ್ಲಿಸಿರುವ ಸೇವೆಗಾಗಿ ಪೂಜಾ ಗಾಂಧಿ ಗೌರವ ಡಾಕ್ಟರೆಟ್ ಪಡೆಯಲಿದ್ದಾರೆ. ತಮಿಳು ಚಿತ್ರರಂಗದಲ್ಲಿ 'ಕೊಕ್ಕಿ' ಸಿನೆಮಾದ ಮೂಲಕ ತಮ್ಮ ವೃತ್ತಿಜೀವನ ಪ್ರಾರಂಭಿಸಿದ ಪೂಜಾ ಗಾಂಧಿ, ಗಣೇಶ್ ಜೊತೆಗೆ ನಟಿಸಿದ 'ಮುಂಗಾರು ಮಳೆ' ಸಿನೆಮಾದ ಮೂಲಕ ಕನ್ನಡಕ್ಕೆ ಬಂದವರು. ಯೋಗರಾಜ್ ಭಟ್ ನಿರ್ದೇಶನದ ಈ ಚಿತ್ರ ದಾಖಲೆ ಪ್ರದರ್ಶನ ಕಂಡು ಪೂಜಾ 'ಮಳೆ ಹುಡುಗಿ' ಎಂಬ ಬಿರುದನ್ನೇ ತಮ್ಮದಾಗಿಸಿಕೊಂಡಿದ್ದರು. 
ಈಗ ಬೆಂಗಳೂರಿನಲ್ಲಿಯೇ ನೆಲೆಸಿರುವ ಪೂಜಾ ಗಾಂಧಿ ಬಹುತೇಕ ಕನ್ನಡ ಚಿತ್ರರಂಗದಲ್ಲಿಯೇ ನಿರತರಾಗಿದ್ದಾರೆ ಮತ್ತು ಇಲ್ಲಿಯವರೆಗೂ ೫೦ ಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಟಿಸಿದ್ದಾರೆ. 'ಅಭಿನೇತ್ರಿ' ಸಿನೆಮಾದ ಮೂಲಕ ನಿರ್ಮಾಪಕರಾಗಿಯೂ ತೊಡಗಿಸಿಕೊಂಡಿದ್ದವರು. 
ಈಗ ದಕ್ಷಿಣ ಕೊರಿಯಾದ ಕೆ ಎ ಇ ಎಸ್ ಇ ಎ ಅಂತಾರಾಷ್ಟ್ರೀಯ ವಿಶ್ವವಿದ್ಯಾಲಯದ ಭಾಗವಾದ ಕಾನ್ಫೆಡೆರೇಶನ್ ಆಫ್ ಇಂಟರ್ನ್ಯಾಷನಲ್ ಅಕ್ರಿಡಿಟೇಷನ್ ಕಮಿಷನ್ ನ ಆಡಳಿತ ಮಂಡಳಿ ಪೂಜಾ ಗಾಂಧಿ ಅವರಿಗೆ ಡಾಕ್ಟರೆಟ್ ನೀಡಲು ಮುಂದಾಗಿದೆ. 
ಈ ಗೌರವ ಡಾಕ್ಟರೆಟ್ ಅನ್ನು ಇಂದು ಟೌನ್ ಹಾಲ್ ನಲ್ಲಿ ಪ್ರಧಾನ ಮಾಡಲಾಗುವುದು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com