ಭಟ್ರ ಮುಂದಿನ ಸಿನಿಮಾದಲ್ಲಿ ಗಣೇಶ್ ಗೆ ನಾಯಕಿಯರಾಗಿ ನಭಾ, ನಿಖಿತಾ?

ಯೋಗರಾಜ್ ಭಟ್ಟರ ಮುಂದಿನ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಭಾ ನಟೇಶ್ ಮತ್ತು ನಿಖಿತಾ ನಾರಾಯಣ್ ನಾಯಕಿಯರಾಗಿ ಅಭಿನಯಿಸಲಿದ್ದಾರೆ ...
ನಭಾ ನಟೇಶ್
ನಭಾ ನಟೇಶ್

ಬೆಂಗಳೂರು: ಯೋಗರಾಜ್ ಭಟ್ಟರ ಮುಂದಿನ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಅವರಿಗೆ ನಭಾ ನಟೇಶ್ ಮತ್ತು ನಿಖಿತಾ ನಾರಾಯಣ್ ನಾಯಕಿಯರಾಗಿ ಅಭಿನಯಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.

ಭಟ್ಟರ ಈ ಸಿನಿಮಾದಲ್ಲಿ ಒಟ್ಟು 4 ಮಂದಿ ನಾಯಕಿಯರು ಇರಲಿದ್ದಾರೆ., ನಭಾ ಮತ್ತು ನಿಖಿತಾ ಈಗಾಗಲೇ ನಿರ್ಮಾಪಕರನ್ನು ಅಪ್ರೋಚ್ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂತೇ ಆದರೆ ನಭ ಮತ್ತು ನಿಖಿತಾ ಗಣೇಶ್ ಗೆ ನಾಯಕಿಯರಾಗಲಿದ್ದಾರೆ.

ನಿರ್ದೇಶಕ ಹರ್ಷ ಅವರ ವಜ್ರಕಾಯ ಚಿತ್ರದಲ್ಲಿ ನಭಾ ನಟೇಶ್ ಶಿವರಾಜ್ ಕುಮಾರ್ ಜೊತೆ ನಟೆಸಿದ್ದರು. ರೂಪದರ್ಶಿಯಾಗಿದ್ದ ನಿಖಿತ ನಾರಾಯಣ್ ಗೋಲ್ ಮಾಲ್ ಬ್ರದರ್ಸ್ ಎಂಬ ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

ಚಿತ್ರತಂಡ ಮತ್ತಿಬ್ಬರು ನಾಯಕಿಯರಿಗಾಗಿ ಹುಡುಕಾಟ ಆರಂಭಿಸಿದೆ, ಗೋಲ್ಡನ್ ಫಿಲ್ಮ್ಸ್ ಮತ್ತು ಯೋಗರಾಜ್ ಭಟ್ ಫಿಲ್ಮ್ ಸಹಯೋಗದಲ್ಲಿ ಈ ಸಿನಿಮಾ ತಯಾರಿಸಲಾಗುತ್ತಿದೆ. ವಿ. ಹರಿಕೃಷ್ಣ ಚಿತ್ರಕ್ಕೆ ಸಂಗೀತ ನೀಡಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com