ಸುದೀಪ್ ನಡೆಸಿಕೊಡುತ್ತಿರುವ ಬಿಗ್ ಬಾಸ್ 4ನೇ ಆವೃತ್ತಿಯಲ್ಲಿ ಈ ವಾರ ಕಾರುಣ್ಯ ಬಿಗ್ ಬಾಸ್ ಮನೆಯಿಂದ ಹೊರಬಂದಿದ್ದಾರೆ.
ಪ್ರತಿ ವಾರ ನಾಮಿನೇಟ್ ಆಗುತ್ತಿದ್ದ ಪ್ರಥಮ್ ಹಾಗೂ ಕಾರುಣ್ಯ ಮಧ್ಯೆ ತೀವ್ರ ಪೈಪೋಟಿ ಏರ್ಪಟಿತ್ತು. ಈ ಮಧ್ಯೆ ಮನೆಯ ಸದಸ್ಯರೆಲ್ಲಾ ಕಾರುಣ್ಯ ಉಳಿವಿಗೆ ಮತ ಚಲಾಯಿಸಿದರೆ ಜನರು ಪ್ರಥಮ್ ನನ್ನು ಉಳಿಸಿದ್ದಾರೆ.
ಮನೆಯಿಂದ ಹೊರಬರುವ ವೇಳೆ ಬಿಗ್ ಬಾಸ್ ಕಾರುಣ್ಯಗೆ ವಿಶೇಷ ಅಧಿಕಾರವೊಂದನ್ನು ಕೊಟ್ಟು ಮನೆಯ ಪಾತ್ರೆಯನ್ನೆಲ್ಲಾ ಬಿಗ್ ಬಾಸ್ ಆದೇಶ ಬರುವವರೆಗೂ ತೊಳೆಯುವ ಶಿಕ್ಷೆಯನ್ನು ನೀಡುವಂತೆ ಸೂಚಿಸಿದರು ಇದಕ್ಕೆ ಕಾರುಣ್ಯ ಸಂಜನಾಗೆ ಈ ಶಿಕ್ಷೆಯನ್ನು ನೀಡಿದ್ದಾರೆ.