ಶಾನ್ವಿ ಕನ್ನಡದ ನೂತನ ಚಾಕೊಲೇಟ್ ಹುಡುಗಿ?

ಕನ್ನಡ ರ್ಯಾಪ್ ಸಂಗೀತಕಾರ ಚಂದನ್ ಶೆಟ್ಟಿ ಅವರು ಐಂದ್ರಿತಾ ರೇ ಅವರ ಜೊತೆಗೆ ನಿರ್ದೇಶಿಸಿದ್ದ ೩ಪೆಗ್ ಸಂಗೀತ ವಿಡಿಯೋ ಯೂಟ್ಯೂಬ್ ನಲ್ಲಿ ೫.೪ ದಶಲಕ್ಷಕ್ಕೂ ಹೆಚ್ಚು ಬಾರು ವೀಕ್ಷಿಸಲಾಗಿದೆ.
ಶಾನ್ವಿ ಶ್ರೀವಾಸ್ತವ
ಶಾನ್ವಿ ಶ್ರೀವಾಸ್ತವ
Updated on
ಬೆಂಗಳೂರು: ಕನ್ನಡ ರ್ಯಾಪ್ ಸಂಗೀತಕಾರ ಚಂದನ್ ಶೆಟ್ಟಿ ಅವರು ಐಂದ್ರಿತಾ ರೇ ಅವರ ಜೊತೆಗೆ ನಿರ್ದೇಶಿಸಿದ್ದ ೩ಪೆಗ್ ಸಂಗೀತ ವಿಡಿಯೋ ಯೂಟ್ಯೂಬ್ ನಲ್ಲಿ ೫.೪ ದಶಲಕ್ಷಕ್ಕೂ ಹೆಚ್ಚು ಬಾರು ವೀಕ್ಷಿಸಲಾಗಿದೆ. ಇದು ದುಬೈ ಪಬ್ ಗಳಲ್ಲಿ ಬಹಳ ಪ್ರಖ್ಯಾತವಾಗಿದೆ ಎನ್ನಲಾಗುತ್ತಿದ್ದು, ಇಂಗ್ಲೆಂಡ್, ಅಮೆರಿಕಾ ಮತ್ತು ಕೆನಡಾದಲ್ಲಿಯೂ ಬಹಳಷ್ಟು ಜನ ವೀಕ್ಷಿಸಿದ್ದಾರಂತೆ. 
ಈ ಜನಪ್ರಿಯ ಅಲೆಯಿಂದ ಉತ್ತೇಜನಗೊಂಡಿರುವ ಚಂದನ್ ಈಗ ಮುಂದಿನ ವಿಡಿಯೋ ನಿರ್ದೇಶಿಸಲು ಮುಂದಾಗಿದ್ದರಂತೆ. ಈ ವಿಡಿಯೋದಲ್ಲಿ ಕಾಣಿಸಿಕೊಳ್ಳುವ ಚಾಕೊಲೇಟ್ ನಟಿ ಅಭಿಮಾನಿಗಳು ಬೇಡಿಕೆ ಮೇರೆಗೆ ಬದಲಾಗಿದ್ದಾರೆ ಎನ್ನುವ ಅವರು "ನನಗೆ ದಿನಾಲು ಸುಮಾರು ೨೦೦ ಸಂದೇಶಗಳು ಬರುತ್ತಿವೆ, ಮುಂದಿನ ವಿಡಿಯೋ ಯಾವಾಗಲೆಂದು. ನಾನು ನೂತನ ಚಾಕೊಲೇಟ್ ಹುಡುಗಿ ಜೊತೆಗೆ ವಿಡಿಯೋ ಅರ್ಪಿಸಲಿದ್ದೇನೆ" ಎನ್ನುತ್ತಾರೆ ಚಂದನ್. 
ಡಿಸೆಂಬರ್ ೧೫ ರಂದು ಈ ಸಂಗೀತ ವಿಡಿಯೋ ಚಿತ್ರೀಕರಣ ಮಾಡಲಿದ್ದಾರಂತೆ. ಮಾಸ್ಟರ್ ಪೀಸ್ ಹೀರೋಯಿನ್ ಶಾನ್ವಿ ಶ್ರೀವಾಸ್ತವ ಅವರನ್ನು ಇದಕ್ಕಾಗಿ ಕೇಳಿಕೊಂಡಿದ್ದಾರಂತೆ. "ಟಿವಿ ಕಾರ್ಯಕ್ರಮವೊಂದರಲ್ಲಿ ನಾನು ಶಾನ್ವಿ ಅವರನ್ನು ಭೇಟಿ ಮಾಡಿದೆ. ನನ್ನ ರ್ಯಾಪ್ ಸಂಗೀತದ ಆಸಕ್ತಿ ಬಗ್ಗೆ ಅವರಿಗೆ ಹೇಳಿದ್ದೇನೆ. ನಾನು ಅವರನ್ನು ಕೇಳಿಕೊಂಡಿದ್ದೇನೆ. ನನ್ನ ಜೊತೆಗೆ ಅವರು ಕೆಲಸ ಮಾಡುವ ಭರವಸೆ ಇದೆ" ಎನ್ನುತ್ತಾರೆ ಚಂದನ್. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com