28 ವರ್ಷಗಳ ನಂತರ ಅಂಜದ ಗಂಡು ಸಿನಿಮಾ ಮತ್ತೆ ರಿಲೀಸ್

80ರ ದಶಕದಲ್ಲಿ ರವಿಚಂದ್ರನ್ ಮತ್ತು ಖುಷ್ಬೂ ಅಭಿನಯದ 'ಅಂಜದ ಗಂಡು' ಸಿನಿಮಾ ಡಿಸೆಂಬರ್ 2 ರಂದು ಮತ್ತೆ ..
ಅಂಜದ ಗಂಡು ಪೋಸ್ಟರ್
ಅಂಜದ ಗಂಡು ಪೋಸ್ಟರ್
Updated on: 

ಬೆಂಗಳೂರು: 80ರ ದಶಕದಲ್ಲಿ ರವಿಚಂದ್ರನ್ ಮತ್ತು ಖುಷ್ಬೂ ಅಭಿನಯದ 'ಅಂಜದ ಗಂಡು' ಸಿನಿಮಾ ಡಿಸೆಂಬರ್ 2 ರಂದು ಮತ್ತೆ ಬಿಡುಗಡೆಯಾಗಲಿದೆ.

ಇದೀಗ ರವಿಚಂದ್ರನ್ ಮತ್ತು ಖುಷ್ಬೂ ಅಭಿನಯದ 'ಅಂಜದ ಗಂಡು'  ಸಿನಿಮಾವನ್ನು ಹೊಸ ತಂತ್ರಜ್ಞಾನದಲ್ಲಿ ಬಿಡುಗಡೆ ಮಾಡುವುದಕ್ಕೆ ನಿರ್ಮಾಪಕ ಬಿ.ಎನ್. ಗಂಗಾಧರ್ ಸಜ್ಜಾಗಿದ್ದಾರೆ. ಈ ಚಿತ್ರ 1988ರಲ್ಲಿ ಬಿಡುಗಡೆಯಾಗಿತ್ತು. ಈಗ 28 ವರ್ಷಗಳ ನಂತರ ಮತ್ತೆ ಬಿಡುಗಡೆಯಾಗುತ್ತಿದೆ.

ಆ ಚಿತ್ರದಲ್ಲಿ `ಪ್ರೀತಿಯಲ್ಲಿ ಇರೋ ಸುಖ', `ಏಕೆ ಹೀಗಾಯ್ತೋ ನಾನು ಕಾಣೇನು', `ನೀಲಿ ಬಾನಲಿ ತೇಲಿ ಹೋದೆನು', `ಮೂರು ಕಾಸಿನ ಕುದುರೆ' ಮುಂತಾದ ಹಾಡುಗಳು ಇಂದಿಗೂ ಜನಪ್ರಿಯ. ಹಂಸಲೇಖ ಅವರು ಸಂಗೀತ ನೀಡಿದ್ದ ಈ ಚಿತ್ರ ಮತ್ತೊಮ್ಮೆ ಪ್ರೇಕ್ಷಕರನ್ನು ಖುಷಿಪಡಿಸುವುದಕ್ಕೆ ಮತ್ತೆ ರಿಲೀಸ್ ಆಗುತ್ತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com