'ಭರ್ಜರಿ' ಸಿನೆಮಾದ ಮೂಲಕ ಧ್ರುವ್ ಅವರಿಗೆ ಆಧ್ಯಾತ್ಮ ಅನುಭವ

ಧ್ರುವ ಸರ್ಜಾ ತಮ್ಮ ಮುಂದಿನ ಸಿನೆಮಾ 'ಭರ್ಜರಿ' ಕ್ಲೈಮ್ಯಾಕ್ಸ್ ಗೆ ಸಿದ್ಧರಾಗುತ್ತಿದ್ದಾರೆ. ಈ ಕ್ಲೈಮ್ಯಾಕ್ಸ್ ಗೆ ದೈವದ ಅನುಭೂತಿ ಸಿಕ್ಕಿದ್ದು ಇಡೀ ವಾತಾವಾರಣ ಧನಾತ್ಮಕತೆಯಿಂದ ತುಂಬಿದೆ ಎನ್ನುತ್ತಾರೆ
ಧ್ರುವ ಸರ್ಜಾ
ಧ್ರುವ ಸರ್ಜಾ
Updated on: 
ಬೆಂಗಳೂರು: ಧ್ರುವ ಸರ್ಜಾ ತಮ್ಮ ಮುಂದಿನ ಸಿನೆಮಾ 'ಭರ್ಜರಿ' ಕ್ಲೈಮ್ಯಾಕ್ಸ್ ಗೆ ಸಿದ್ಧರಾಗುತ್ತಿದ್ದಾರೆ. ಈ ಕ್ಲೈಮ್ಯಾಕ್ಸ್ ಗೆ ದೈವದ ಅನುಭೂತಿ ಸಿಕ್ಕಿದ್ದು ಇಡೀ ವಾತಾವಾರಣ ಧನಾತ್ಮಕತೆಯಿಂದ ತುಂಬಿದೆ ಎನ್ನುತ್ತಾರೆ ನಟ ಧ್ರುವ. 
ಇದಕ್ಕಾಗಿ ವೈಭವಾದ ಸೆಟ್ ಹಾಕಲಾಗಿದೆಯಂತೆ. ಈ ಚಿತ್ರೀಕರಣ ಒಂದು ವಾರ ನಡೆಯಲಿದ್ದು, ರಚಿತಾ ರಾಮ್, ಹರಿಪ್ರಿಯಾ, ವೈಶಾಲಿ ದೀಪಕ್, ಶ್ರೀನಿವಾಸ ಮೂರ್ತಿ, ಅವಿನಾಶ್, ರಂಗಾಯಣ ರಘು, ಜಹಾಂಗೀರ್, ಅನಿಲ್, ರಾಘವ್ ಉದಯ್ ಮುಂತಾದವರು ಸೇರಿದಂತೆ 20 ಕ್ಕೂ ಹೆಚ್ಚು ಜನ ಕಲಾವಿದರು ಭಾಗವಹಿಸಲಿದ್ದಾರಂತೆ. 
ಗಣೇಶ, ಹನುಮಂತ ಮತ್ತು ದೇವಿ ಮೂರ್ತಿಗಳನ್ನು ಪ್ರತಿಷ್ಠಾಪಿಸುವ ಮೂಲಕ ಕ್ಲೈಮ್ಯಾಕ್ಸ್ ಗೆ ದೈವಿಕ ವಾತಾವರಣ ಸೃಷ್ಟಿಸಲಾಗಿದೆ ಎನ್ನುತ್ತಾರೆ ನಿರ್ದೇಶಕ ಚೇತನ್ ಕುಮಾರ್. 
ಈ ಚಿತ್ರೀಕರಣದ ವೇಳೆ ನಿರ್ದೇಶಕ ಮತ್ತು ನಟ ವ್ರತಕ್ಕೆ ಮೊರೆ ಹೋಗಿದ್ದು ಸಂಪೂರ್ಣ ಸಸ್ಯಹಾರಿಗಳಾಗಿದ್ದಾರಂತೆ. ಈ ಸಿನೆಮಾಗೆ ಹರಿಕೃಷ್ಣ ಸಂಗೀತ ನೀಡಿದ್ದು, ಶ್ರೀಶಾ ಕುಡುವಲ್ಲಿ ಅವರ ಸಿನೆಮ್ಯಾಟೋಗ್ರಫಿ ಇದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com