ಸಾಧು ಕೋಕಿಲಾ-ಸುರಾಗ್
ಸಾಧು ಕೋಕಿಲಾ-ಸುರಾಗ್

ಸಾಧು ಪುತ್ರ ಸುರಾಗ್ ಸಂಗೀತ ನಿರ್ದೇಶಕನಾಗಿ ಪಾದಾರ್ಪಣೆ

ಚೇತನ್ ಮತ್ತು ಲತಾ ಹೆಗಡೆ ನಟಿಸುತ್ತಿರುವ ಮಹೇಶ್ ಬಾಬು ನಿರ್ದೇಶನದ ಸಿನೆಮಾದ ಮೂಲಕ ಹಾಸ್ಯ ನಟ ಮತ್ತು ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅವರ ಪುತ್ರ ಸುರಾಗ್ ಕನ್ನಡ ಚಿತ್ರರಂಗದ ನೂತನ
Published on
ಬೆಂಗಳೂರು: ಚೇತನ್ ಮತ್ತು ಲತಾ ಹೆಗಡೆ ನಟಿಸುತ್ತಿರುವ ಮಹೇಶ್ ಬಾಬು ನಿರ್ದೇಶನದ ಸಿನೆಮಾದ ಮೂಲಕ ಹಾಸ್ಯ ನಟ ಮತ್ತು ಸಂಗೀತ ನಿರ್ದೇಶಕ ಸಾಧು ಕೋಕಿಲಾ ಅವರ ಪುತ್ರ ಸುರಾಗ್ ಕನ್ನಡ ಚಿತ್ರರಂಗದ ನೂತನ ಸಂಗೀತ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ. 
ಈ ವಿಷಯವನ್ನು ಧೃಢೀಕರಿಸುವ ನಿರ್ದೇಶಕ "ನಾಲ್ಕು ವರ್ಷದ ಮಗುವಿನಿಂದಲೂ ಸುರಾಗ್ ನನ್ನು ಬಲ್ಲೆ. ಅದ್ಭುತವಾದ ಸಂಗೀತವನ್ನು ಕೇಳಿ ಬೆಳೆದ ಅದೃಷ್ಟವಂತ ಹುಡುಗ ಅವನು. ಬಹು ಪ್ರತಿಭೆಗಳ ಪ್ರವೀಣ ಅವರ ತಂದೆಗೆ ಧನ್ಯವಾದಗಳು. ನಾವು ಹೊಸ ಪ್ರತಿಭೆಯನ್ನು ಪರಿಚಯಿಸಬೇಕು ಎಂದು ನಿಶ್ಚಯಿಸಿದಾಗ ಸುರಾಗ್ ಅವರ ಹೆಸರು ಮೊದಲಿಗೆ ಹೊಳೆಯಿತು" ಎನ್ನುತ್ತಾರೆ ಮಹೇಶ್ ಬಾಬು. 
ತಮ್ಮ ತಂದೆ ಮತ್ತು ಇನ್ನಿತರ ಸಂಗೀತ ನಿರ್ದೇಶಕರ ಜೊತೆಗೆ ಕೆಲಸ ಮಾಡುತ್ತಿರುವ ಸುರಾಗ್ ಈಗ ಇನ್ನು ಹೆಸರಿಡದ ಈ ಚಿತ್ರಕ್ಕೆ ಸ್ವತಂತ್ರ ಸಂಗೀತ ನಿರ್ದೇಶಕನಾಗಿ ಹೊರಹೊಮ್ಮಿದ್ದಾರೆ.
ಈ ಮಧ್ಯೆ ಈ ಸಿನೆಮಾದಲ್ಲಿ ಕಬೀರ್ ದುಹಾನ್ ಸಿಂಗ್ ಖಳನಾಯಕನಾಗಿ ನಟಿಸಲಿದ್ದಾರಂತೆ. "ಅವರು ಸದ್ಯಕ್ಕೆ ಎಸ್ ಕೃಷ್ಣ ನಿರ್ದೇಶನದ 'ಹೆಬ್ಬುಲಿ'ಯಲ್ಲಿ ನಟಿಸುತ್ತಿದ್ದಾರೆ ನಂತರ ನಮ್ಮ ಸಿನೆಮಾ ಸೆಟ್ ಸೇರಲಿದ್ದಾರೆ. ನಮ್ಮ ಸಿನೆಮಾ ನವೆಂಬರ್ 9 ರಿಂದ ಚಿತ್ರೀಕರಣ ಪ್ರಾರಂಭಿಸಲಿದೆ" ಎನ್ನುತ್ತಾರೆ ನಿರ್ದೇಶಕ.  

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

Advertisement

X
Kannada Prabha
www.kannadaprabha.com