ನ್ಯೂಯಾರ್ಕ್: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ, ನ್ಯೂಯಾರ್ಕ್ ನಲ್ಲಿ ಭಾರತೀಯ-ಕೆನಡಿಯನ್ ಮೂಲದ ನಟಿ ಸನ್ನಿ ಲಿಯೋನ್ ಜೊತೆಗೆ ಸಂಭ್ರಮದ ಮಧ್ಯಾಹ್ನ ಕಳೆದಿದ್ದಾರೆ.
ಪ್ರಿಯಾಂಕಾ ಸದ್ಯಕ್ಕೆ ಅಮೆರಿಕಾ ಟಿವಿ ಧಾರಾವಾಹಿ 'ಕ್ವಾಂಟಿಕೋ'ದ ಎರಡನೇ ಆವೃತ್ತಿಯ ಚಿತ್ರೀಕರಣದಲ್ಲಿ ತೊಡಗಿಸಿಕೊಂಡಿದ್ದರೆ, ನ್ಯೂಯಾರ್ಕ್ ಫ್ಯಾಷನ್ ವೀಕ್ ನಲ್ಲಿ ಸನ್ನಿ ಲಿಯೋನ್ ಭಾಗವಹಿಸುತ್ತಿದ್ದರು. ಆಗ ಇಬ್ಬರು ಭೇಟಿ ಮಾಡಲು ನಿರ್ಧರಿಸಿದ್ದಾರೆ.
"ಪ್ರಿಯಾಂಕಾ ಚೋಪ್ರಾ ಜೊತೆಗೆ ಒಳ್ಳೆಯ ಮಧ್ಯಾಹ್ನ ಕಳೆದೆ, ನ್ಯೂಯಾರ್ಕ್ ನಲ್ಲಿ ಒಳ್ಳೆಯ ಸಮಯ .. ಲವ್.. ನೀವು ಗೊಂಬೆ" ಎಂದು ಸನ್ನಿ ಟ್ವೀಟ್ ಮಾಡಿದ್ದಾರೆ.