ಕನ್ನಡ ಮತ್ತು ತೆಲುಗಿನಲ್ಲಿ ಏಕಕಾಲಕ್ಕೆ ನಿರ್ಮಾಣವಾಗಿರುವ ಸಿನೆಮಾ ದಸರಾ ಹಬ್ಬಕ್ಕೆ ಬಿಡುಗಡೆಗೆ ಸಿದ್ಧವಾಗಿದೆ. ಇದರ ಬಗ್ಗೆ ಮಾತಿಗಿಳಿವ ಪ್ರಕಾಶ್ "ನಮಗೆ ರಾಮಾಯಣ ಎಂದರೆ ರಾಮ, ಸೀತೆ ಮತ್ತು ರಾವಣ. ಎಷ್ಟೋ ಪರಿಸ್ಥಿಗಳಲ್ಲಿ ನಾವು ರಾಮಾಯಣದ ಪಾತ್ರಗಳಾಗಿಬಿಡುತ್ತೇವೆ. ರಾಮ ಆಗುವುದು ಹಿತ ಆದರೆ ಎಷ್ಟೋ ಬಾರಿ ರಾವಣ ನಮ್ಮೊಳಗಿರುತ್ತಾನೆ. ಕೆಲವು ಬಾರಿ ನಮ್ಮ ಮಾಮೂಲಿ ಜೀವನದಿಂದ, ಬೇರೆ ದಾರಿ ಹಿಡಿದು ಅಹಿತಕಾರಿ ಪರಿಸ್ಥಿತಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತೇವೆ. ಇದನ್ನು ನಾವು ಅರಿತುಕೊಂಡು ಹೊಸ ವ್ಯಕ್ತಿಯಾಗಿ ಹೊಮ್ಮುವುದೇ ಇದಕ್ಕೆ ಪರಿಹಾರ. ಈ ಬದಲಾವಣೆಯೇ ಈ ಸಿನೆಮಾದ ಜೀವಾಳ" ಎಂದು ಪ್ರಕಾಶ್ ವಿವರಿಸುತ್ತಾರೆ.