ಡ್ರಾಮಾ ಜ್ಯೂನಿಯರ್ಸ್: ಪುಟ್ಟರಾಜು, ಚಿತ್ರಾಲಿ ವಿಜೇತರು

ಕನ್ನಡಿಗರ ಅದರಲ್ಲೂ ಮಕ್ಕಳ ಮನ ಗೆದ್ದಿದ್ದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ...
ಚಿತ್ರಾಲಿ-ಪುಟ್ಟರಾಜು
ಚಿತ್ರಾಲಿ-ಪುಟ್ಟರಾಜು
ಬೆಂಗಳೂರು: ಕನ್ನಡಿಗರ ಅದರಲ್ಲೂ ಮಕ್ಕಳ ಮನ ಗೆದ್ದಿದ್ದ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ರಿಯಾಲಿಟಿ ಶೋ ಡ್ರಾಮಾ ಜ್ಯೂನಿಯರ್ಸ್ ನ ಅಂತಿಮ ಸುತ್ತಿನಲ್ಲಿ ಗದಗಿನ ಪುಟ್ಟರಾಜು ಹಾಗೂ ಮಂಗಳೂರಿನ ಚಿತ್ರಾಲಿ ವಿಜೇತರಾಗಿ ಹೊರಹೊಮ್ಮಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.
ನಿನ್ನೆ ಸಂಜೆ ಗದಗದಲ್ಲಿ ನಡೆದ ಗ್ರ್ಯಾಂಡ್ ಫಿನಾಲೆ ಕಾರ್ಯಕ್ರಮದಲ್ಲಿ ಪುಟ್ಟರಾಜು ಹಾಗೂ ಚಿತ್ರಾಲಿರನ್ನು ಜಂಟಿ ವಿಜೇತರೆಂದು ಘೋಷಿಸಲಾಯಿತು. ಮಹೇಂದ್ರ ಮೊದಲ ರನ್ನರ್ ಅಪ್ ಆಗಿದ್ದರೆ, ಅಮೋಘಾ ಎರಡನೇ ರನ್ನರ್ ಅಪ್ ಆಗಿದ್ದಾರೆ ಎಂದು ಕಾರ್ಯಕ್ರಮದಲ್ಲಿ ಭಾಗವಹಿಸಿದವರು ಹೇಳಿದ್ದಾರೆ. ಆದರೆ ವಾಹಿನಿ ಕಡೆಯಿಂದ  ಇನ್ನೂ ಅಧಿಕೃತ ಪ್ರಕಟಣೆ ಹೊರಬಿದ್ದಿಲ್ಲ.
ಗ್ರಾಂಡ್ ಫಿನಾಲೆ ಕಾರ್ಯಕ್ರಮದ ನೇರ ಪ್ರಸಾರವಾಗಿಲ್ಲ. ಇದು ಅಕ್ಟೋಬರ್ 1 ಮತ್ತು 2ರಂದು ಪ್ರಸಾರವಾಗುವ ಸಾಧ್ಯತೆಯಿದೆ.
ಅಂತಿಮ ಸುತ್ತಿಗೆ ಅಚಿಂತ್ಯಾ, ತುಷಾರ್, ಪುಟ್ಟರಾಜು, ಚಿತ್ರಾಲಿ, ಅಮೋಘ, ಮಹೇಂದ್ರ, ರೇವತಿ ಹಾಗೂ ತೇಜಸ್ವಿನಿ ಆಯ್ಕೆಯಾಗಿದ್ದರು. 
ಕಳೆದ ಏಪ್ರಿಲ್ 30ರಿಂದ ಡ್ರಾಮಾ ಜ್ಯೂನಿಯರ್ಸ್ ಝೀ ವಾಹಿನಿಯಲ್ಲಿ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿತ್ತು. ಮಾಸ್ಟರ್ ಆನಂದ್ ಕಾರ್ಯಕ್ರಮದ ನಿರೂಪಣೆ ಹೊಣೆಯನ್ನು ನಿರ್ವಹಿಸಿದ್ದರೆ ತೀರ್ಪುಗಾರರಾಗಿ  ಕಿರುತೆರೆ ನಿರ್ದೇಶಕ ಟಿಎನ್ ಸೀತಾರಾಮ್, ಹಿರಿಯ ಕಲಾವಿದೆ ಲಕ್ಷ್ಮಿ ಹಾಗೂ ನಟ ವಿಜಯ್ ರಾಘವೇಂದ್ರ ಭಾಗವಹಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com