ಕನ್ನಡದ ಬಿಗ್ ಬಾಸ್ ಮನೆಯಲ್ಲಿ ಟೀಂ ಇಂಡಿಯಾ ಕ್ರಿಕೆಟರ್?

ಅಕ್ಟೋಬರ್‌ 9ರಿಂದ ಕಲರ್ಸ್ ಕನ್ನಡದಲ್ಲಿ ಬಿಗ್‌ಬಾಸ್‌ ಸೀಸನ್‌ 4 ಆರಂಭವಾಗಲಿದೆ. ಎಂದಿನಂತೆ ಈ ಬಾರಿಯೂ ಬಿಗ್‌ಬಾಸ್‌ ಮನೆಯೊಳಗೆ ಹೋಗೋ ..
ಬಿಗ್ ಬಾಸ್ ಲೋಗೋ
ಬಿಗ್ ಬಾಸ್ ಲೋಗೋ
Updated on

ಬೆಂಗಳೂರು: ಅಕ್ಟೋಬರ್‌ 9ರಿಂದ ಕಲರ್ಸ್ ಕನ್ನಡದಲ್ಲಿ ಬಿಗ್‌ಬಾಸ್‌ ಸೀಸನ್‌ 4 ಆರಂಭವಾಗಲಿದೆ. ಎಂದಿನಂತೆ ಈ ಬಾರಿಯೂ ಬಿಗ್‌ಬಾಸ್‌ ಮನೆಯೊಳಗೆ ಹೋಗೋ ಸ್ಪರ್ಧಿಗಳ ಹೆಸರು ಸಿಕ್ಕಾಪಟ್ಟೆ ಹರಿದಾಡ್ತಿವೆ.

ಆದರೆ ವಾಹಿನಿಯವರು ಮಾತ್ರ ಭಾಗವಹಿಸುವ ಸ್ಪರ್ಧಿಗಳ ವಿಚಾರವನ್ನು ಅಧಿಕೃತವಾಗಿ ಬಹಿರಂಗಪಡಿಸಿಲ್ಲ. ಆದರೂ ನವೀನ್‌ ಕೃಷ್ಣ, ಸುಧಾರಾಣಿ, ಶೀತಲ್‌ ಶೆಟ್ಟಿ, ಕಿರಿಕ್‌ ಕೀರ್ತಿ, ರಾಗಿಣಿ ಮುಂತಾದವರ ಹೆಸರುಗಳು ಕೇಳಿ ಬರ್ತಿವೆ. ಈ ಬೆನ್ನಲ್ಲಿಯೇ ಮತ್ತೊಬ್ಬ ಸೆಲೆಬ್ರಿಟಿಯ ಹೆಸರು ಗಿರಕಿ ಹೊಡೆಯುತ್ತಿದೆ.

ಟೀಂ ಇಂಡಿಯಾ ಕ್ರಿಕೆಟಿಗ ಶ್ರೀಶಾಂತ್‌ ಹೆಸರು ಸದ್ಯಕ್ಕೆ ಎಲ್ಲೆಡೆ ಹರಿದಾಡ್ತಿದೆ. ಶ್ರೀಶಾಂತ್‌ 'ಬಿಗ್‌ಬಾಸ್‌ ಸೀಸನ್‌ 4'ಗೆ ಬರಲಿದ್ದಾರೆ ಅನ್ನೋ ಸುದ್ದಿ ಕೇಳಿ ಬರುತ್ತಿದೆ. ಈ ಹಿಂದೆ ಗೋಲ್ಡನ್‌ ಸ್ಟಾರ್‌ ನಡೆಸಿಕೊಡುತ್ತಿದ್ದ 'ಸೂಪರ್‌ ಮಿನಿಟ್‌' ಗೇಮ್‌ ಶೋನಲ್ಲೂ ಶ್ರೀಶಾಂತ್‌ ಕಾಣಿಸಿಕೊಂಡಿದ್ದರು. ಬಿಗ್ ಬಾಸ್ ಮನೆಗೆ ಶ್ರೀಶಾಂತ್ ಬರುತ್ತಾರಾ ಅನ್ನೋದನ್ನು ಕಾದು ನೋಡಬೇಕು.

ಶ್ರೀಶಾಂತ್ ಹೊರತಾಗಿ ಬಿಗ್ ಬಾಸ್ ಮನೆಗೆ ತೆರಳುತ್ತಾರೆ ಎಂಬುವವರ ಪಟ್ಟಿಯೊಂದು ಲೀಕ್ ಆಗಿದೆ, ಅದರಂತೆ ನಟಿಯರಾದ ಸುಧಾರಾಣಿ, ವನಿತಾ ವಾಸು, ಚಾರುಲತಾ, ರೂಪಿಕಾ,ಶೀತಲ್ ಶೆಟ್ಟಿ, ಕಿರಿಕ್ ಕೀರ್ತಿ ಮುಂತಾದವರ ಹೆಸರುಗಳು ಕೇಳಿ ಬರುತ್ತಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com