ಕೊನೆಗೂ 'ಹಯಗ್ರೀವ'ನಾಗಿ ಧ್ರುವ್ ಸರ್ಜಾ

ನಟ ಧ್ರುವ್ ಸರ್ಜಾ, ನಿರ್ದೇಶಕ ನಂದ ಕಿಶೋರ್ ಮತ್ತು ನಿರ್ಮಾಪಕ ಬಿ ಕೆ ಗಂಗಾಧರ್ ಅವರನ್ನು ಮೂರೂ ವರೆ ವರ್ಷಗಳ ಹಿಂದೆ ಒಟ್ಟಿಗೆ ತಂದ ಯೋಜನೆ ಕೊನೆಗೂ ಮುಂದುವರೆಯುತ್ತಿದೆ.
ನಟ ಧ್ರುವ್ ಸರ್ಜಾ
ನಟ ಧ್ರುವ್ ಸರ್ಜಾ
Updated on: 
ಬೆಂಗಳೂರು: ನಟ ಧ್ರುವ್ ಸರ್ಜಾ, ನಿರ್ದೇಶಕ ನಂದ ಕಿಶೋರ್ ಮತ್ತು ನಿರ್ಮಾಪಕ ಬಿ ಕೆ ಗಂಗಾಧರ್ ಅವರನ್ನು ಮೂರೂ ವರೆ ವರ್ಷಗಳ ಹಿಂದೆ ಒಟ್ಟಿಗೆ ತಂದ ಯೋಜನೆ ಕೊನೆಗೂ ಮುಂದುವರೆಯುತ್ತಿದೆ. ರಾಮನವಮಿಯ ದಿನ ಸ್ಕ್ರಿಪ್ಟ್ ಪೂಜೆ ನಡೆದಿದ್ದು, ಏಪ್ರಿಲ್ ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಅದಕ್ಕೂ ಮುಂಚಿತವಾಗು ಅದ್ದೂರಿ ಮುಹೂರ್ತ ನೆರವೇರಲಿದೆಯಂತೆ. 
ಈಗ ಸದ್ಯಕ್ಕೆ ರಾಕ್ಲೈನ್ ವೆಂಕಟೇಶ್ ನಿರ್ಮಿಸುತ್ತಿರುವ 'ವಿಐಪಿ' ರಿಮೇಕ್ ನ ಚಿತ್ರೀಕರಣದ ನಂತರದ ಕೆಲಸಗಳಲ್ಲಿ ನಿರತರಾಗಿರುವ ನಂದ ಜೊತೆಜೊತೆಗೆ ಧ್ರುವ್ ಯೋಜನೆಯನ್ನು ಪ್ರಾರಂಭಿಸಲಿದ್ದಾರಂತೆ. ಈ ಮಧ್ಯೆ ಬಹುದಿನಗಳಿಂದ ಚಿತ್ರೀಕರಣಗೊಳ್ಳುತ್ತಿರುವ 'ಭರ್ಜರಿ' ಸಿನೆಮಾದ ಚಿತ್ರೀಕರಣ ಬಹುತೇಕ ಮುಗಿಸಿದ್ದು, ಕೇವಲ ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿಯಿದೆ.
"ನಾನು ಉತ್ಸುಕನಾಗಿದ್ದೀನಿ" ಎನ್ನುವ ನಿರ್ಮಾಪಕ ಗಂಗಾಧರ್ "ನನ್ನ ಕೊನೆಯ ಚಿತ್ರ 'ಅಧ್ಯಕ್ಷ' ೨೦೧೪ ರಲ್ಲಿ ಬಿಡುಗಡೆಯಾಗಿತ್ತು. ನಾನು ನಟ ಮತ್ತು ನಿರ್ದೇಶಕರ ತಂಡಕ್ಕಾಗಿ ಕಾಯುತ್ತಿದ್ದೆ. ಇಬ್ಬರೂ ಅವರ ಪೂರ್ವನಿಯೋಜಿತ ಕೆಲಸಗಳಲ್ಲಿ ಬ್ಯುಸಿಯಾಗಿದ್ದರು. ಈಗ ಅವರು ನನ್ನ ಯೋಜನೆಯ ಮೇಲೆ ಗಮನ ಹರಿಸಲಿದ್ದಾರೆ" ಎನ್ನುತ್ತಾರೆ 'ಗೆಳೆಯ', ಶೌರ್ಯ', 'ಜರಾಸಂಧ' ಮತ್ತು 'ಚಂದ್ರಲೇಖಾ' ಸಿನೆಮಾಗಳ ನಿರ್ಮಾಪಕ. 
ಮೊದಲಿಗೆ ತೆಲುಗು ಸಿನೆಮಾ 'ಕಂದಿರೀಗ' ರಿಮೇಕ್ ಮಾಡುವ ಯೋಜನೆ ಹೊಂದಿದ್ದರು ನಂತರ ನಿರ್ದೇಶಕ ಧ್ರುವ್ ಗಾಗಿಯೇ ಮತ್ತೊಂದು ಕಥೆ ರಚಿಸಿದ ಮೇಲೆ ಈಗ ಯೋಜನೆಯನ್ನು ಬದಲಿಸಲಾಗಿದೆ. "ಈ ಯೋಜನೆ ಅತಿ ವಿಳಂಬವಾದರೂ. ನಂದ ಈಗ ಅದ್ಭುತ ಸ್ಕ್ರಿಪ್ಟ್ ಹಿಡಿದು ಹಿಂದಿರುಗಿದ್ದಾರೆ. ಇದು ಆರು ತಿಂಗಳ ಹಿಂದೆಯೇ ಸಿದ್ಧವಿತ್ತು ಮತ್ತು ಚಿತ್ರೀಕರಣದ ಸಮಯಕ್ಕೆ ರೂಪುಗೊಳ್ಳಲಿದೆ" ಎನ್ನುತ್ತಾರೆ ಗಂಗಾಧರ್. 
"ಧ್ರುವ್ ಅವರ ಮುಂದಿನ ಸಿನೆಮಾ 'ಹಯಗ್ರೀವ'" ಎಂದು ಘೋಷಿಸಿದ್ದಾರೆ ಗಂಗಾಧರ್. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com