ಚಿತ್ರದ ಸ್ಟಿಲ್
ಚಿತ್ರದ ಸ್ಟಿಲ್

ಬಾಹುಬಲಿ 2' ಬಿಡುಗಡೆಗೆ ತಡೆ ನೀಡಲು ಮದ್ರಾಸ್ ಹೈಕೋರ್ಟ್ ನಕಾರ

ಏಪ್ರಿಲ್ 28ಕ್ಕೆ ತೆರೆ ಕಾಣುತ್ತಿರುವ ಬಹುಭಾಷಾ ಚಿತ್ರ 'ಬಾಹುಬಲಿ 2' ತಮಿಳುನಾಡಿನಲ್ಲಿ ಬಿಡುಗಡೆಗೆ ತಡೆ ನೀಡಲು ಮದ್ರಾಸ್ ಹೈಕೋರ್ಟ್ ಗುರುವಾರ...
ಚೆನ್ನೈ: ಏಪ್ರಿಲ್ 28ಕ್ಕೆ ತೆರೆ ಕಾಣುತ್ತಿರುವ ಬಹುಭಾಷಾ ಚಿತ್ರ 'ಬಾಹುಬಲಿ 2' ತಮಿಳುನಾಡಿನಲ್ಲಿ ಬಿಡುಗಡೆಗೆ ತಡೆ ನೀಡಲು ಮದ್ರಾಸ್ ಹೈಕೋರ್ಟ್ ಗುರುವಾರ ನಿರಾಕರಿಸಿದೆ.
'ಬಾಹುಬಲಿ 2' ತಮಿಳು ಚಿತ್ರವನ್ನು ತಮಿಳುನಾಡಿನಲ್ಲಿ ಬಿಡುಗಡೆಯ ಹಕ್ಕು ಪಡೆದಿರುವ ಶ್ರೀ ಗ್ರೀನ್ ಪ್ರೊಡಕ್ಷನ್ಸ್ 1.18 ಕೋಟಿ ರುಪಾಯಿ ಬಾಕಿ ಉಳಿಸಿಕೊಂಡಿದ್ದು, ಚಿತ್ರ ಬಿಡುಗಡೆಗೆ ತಡೆಯಾಜ್ಞೆ ನೀಡುವಂತೆ ಚೆನ್ನೈ ಮೂಲದ ಎಸಿಇ ಮೀಡಿಯಾ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿತ್ತು. 
ನ್ಯಾಯಮೂರ್ತಿ ಕೆ.ಕಲ್ಯಾಣಸುಂದರಂ ಅವರು ಚಿತ್ರ ಬಿಡುಗಡೆಗೆ ತಡೆ ನೀಡಲು ನಿರಾಕರಿಸಿದ್ದಾರೆ. ಆದರೆ ಎಸಿಎ ಮೀಡಿಯಾ ಆರೋಪದ ಬಗ್ಗೆ ಏಪ್ರಿಲ್ 18ರಂದು ಪ್ರತಿಕ್ರಿಯೆ ಸಲ್ಲಿಸುವಂತೆ ಶ್ರೀ ಗ್ರೀನ್ ಪ್ರೊಡಕ್ಷನ್ಸ್ ಗೆ ಸೂಚಿಸಿದೆ.
ಕಳೆದ ಜನವರಿಯಲ್ಲಿ ಶ್ರೀ ಗ್ರೀನ್ ಪ್ರೊಡಕ್ಷನ್ಸ್‌ ಮುಖ್ಯಸ್ಥ ಎಂ ಎಸ್ ಶರವಣನ್ ತಮ್ಮಿಂದ 1.8 ಕೋಟಿ ಸಾಲ ಪಡೆದಿದ್ದು, ಚಿತ್ರ ಬಿಡುಗಡೆ ಆಗುವ ಮುನ್ನ 10 ಲಕ್ಷ ರುಪಾಯಿ ಬಡ್ಡಿ ಸೇರಿಸಿ ಎಲ್ಲ ಹಣವನ್ನು ಹಿಂತಿರುಗಿಸುವುದಾಗಿ ಹೇಳಿದ್ದರು. ಆದರೆ ಇದುವರೆಗೂ ಹಣ ನೀಡಿಲ್ಲ ಎಂದು ದೂರಿದ್ದಾರೆ.

Related Stories

No stories found.

Advertisement

X
Kannada Prabha
www.kannadaprabha.com