2020ಕ್ಕೆ ಬಹುನಿರೀಕ್ಷಿತ ಅವತಾರ್ 2 ಬಿಡುಗಡೆ

2009ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಅವತಾರ್ ಚಿತ್ರದ ಮುಂದುವರೆದ ಭಾಗ ಅವತಾರ್-2 2020ಕ್ಕೆ ತೆರೆಗೆ ಅಪ್ಪಳಿಸಲಿದೆ...
ಅವತಾರ್
ಅವತಾರ್
Updated on
2009ರಲ್ಲಿ ಬಿಡುಗಡೆಯಾಗಿ ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದ ಅವತಾರ್ ಚಿತ್ರದ ಮುಂದುವರೆದ ಭಾಗ ಅವತಾರ್-2 2020ಕ್ಕೆ ತೆರೆಗೆ ಅಪ್ಪಳಿಸಲಿದೆ. 
ಎಲ್ಲಾ ಅಂದುಕೊಂಡಂತೆ ಆಗಿದ್ದರೆ ಅವತಾರ್ 2 ಚಿತ್ರ ಈಗಾಗಲೇ ಬಿಡುಗಡೆಯಾಗಬೇಕಿತ್ತು. ಆದರೆ ಚಿತ್ರದ ನಿರ್ಮಾಪಕರು ಒಟ್ಟಿಗೆ ಭಾಗ 2,3,4,5 ನಿರ್ಮಿಸಲು ಮುಂದಾಗಿದ್ದು ಇದೇ ಕಾರಣಕ್ಕೆ ಚಿತ್ರದ ಬಿಡುಗಡೆ ಮುಂದಕ್ಕೆ ಹೋಗಿದೆ. 
ಅವರಾತ್ 2 ಚಿತ್ರ 2020ರ ಡಿಸೆಂಬರ್ 18, ಭಾಗ 3 2021ರ ಡಿಸೆಂಬರ್ 17, ಭಾಗ 4 2024, ಭಾಗ 5 2025ಕ್ಕೆ ಬಿಡುಗಡೆಯಾಗಲಿದೆ ಎಂದು ಫೇಸ್ ಬುಕ್ ಪುಟದಲ್ಲಿ ನಿರ್ದೇಶಕ ಕ್ಯಾಮೆರಾನ್ ಹಾಗೂ ಅವರ ಜತೆ ಕಾರ್ಯನಿರ್ವಹಿಸುತ್ತಿರುವ ಚಿತ್ರ ತಂಡದ ಫೋಟೋ ಪ್ರಕಟಿಸಿದ್ದಾರೆ. 
2009ರಲ್ಲಿ ಅವತಾರ್ ಚಿತ್ರ ಪಂಡೋರಾದ ನೀಲಿ ಮೈ ಬಣ್ಣದ ನಾವಿಗಳು ಹಾಗೂ ಮನುಷ್ಯರ ನಡುವಿನ ಘರ್ಷಣೆಯ ಕಥಾವಸ್ತು ಹೊಂದಿತ್ತು. ಈ ಚಿತ್ರ ಅಂದಾಜು 17 ಸಾವಿರ ಕೋಟಿ(2.7 ಬಿಲಿಯನ್ ಡಾಲರ್) ಸಂಗ್ರಹಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com