ಶೂ ಲೇಸ್ ಸರಿಯಾಗಿ ಕಟ್ಟುವಂತೆ ಸಹಾಯಕನಿಗೆ ನಟ ಬಾಲಕೃಷ್ಣ ಥಳಿತ: ವಿಡಿಯೋ ವೈರಲ್

ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ತಮ್ಮ ಸಹಾಯಕನಿಗೆ ಶೂ ಲೇಸ್ ಸರಿಯಾಗಿ ಕಟ್ಟುವಂತೆ ಥಳಿಸಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ...
ನಂದಮೂರಿ ಬಾಲಕೃಷ್ಣ
ನಂದಮೂರಿ ಬಾಲಕೃಷ್ಣ
ಚೆನ್ನೈ: ತೆಲುಗಿನ ಖ್ಯಾತ ನಟ ನಂದಮೂರಿ ಬಾಲಕೃಷ್ಣ ತಮ್ಮ ಸಹಾಯಕನಿಗೆ ಶೂ ಲೇಸ್ ಸರಿಯಾಗಿ ಕಟ್ಟುವಂತೆ ಥಳಿಸಿದ್ದು ಈ ವಿಡಿಯೋ ಇದೀಗ ವೈರಲ್ ಆಗಿದೆ. 
ಬಾಲಕೃಷ್ಣ ಅಭಿನಯದ 102ನೇ ಚಿತ್ರದ ಶೂಟಿಂಗ್ ಗುರುವಾರ ಪ್ರಾರಂಭವಾಗಿದ್ದು ಈ ವೇಳೆ ಸಹಾಯಕನಿಗೆ ಶೂ ಲೇಸ್ ಸರಿಯಾಗಿ ಕಟ್ಟುವಂತೆ ಥಳಿಸಿರುವ ದೃಶ್ಯಗಳನ್ನು ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಕ್ಕೆ ಅಪ್ ಲೋಡ್ ಮಾಡಿದ್ದು ವಿಡಿಯೋ ವೈರಲ್ ಆಗಿದೆ. 
ಇಂತರ ಘಟನೆಗಳು ಬಾಲಕೃಷ್ಣ ಅವರಿಗೆ ಹೊಸದೆನಲ್ಲ ಕಳೆದ ವರ್ಷ ಅವರ  ಅಭಿಮಾನಿಯೊಬ್ಬ ಸೆಲ್ಫಿ ತೆಗೆದುಕೊಳ್ಳಲು ಮುಂದಾದಾಗ ಆತನಿಗೆ ಥಳಿಸಿದ್ದರು. 
57 ವರ್ಷದ ಬಾಲಕೃಷ್ಣ ಅವರು ಸದ್ಯ ಕೆಎಸ್ ರವಿಕುಮಾರ್ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಬಾಲಕೃಷ್ಣ ಅವರಿಗೆ ನಯನತಾರಾ ನಾಯಕಿಯಾಗಿ ನಟಿಸುತ್ತಿದ್ದು ಇದು ಬಾಲಕೃಷ್ಣ ಮತ್ತು ನಯನತಾರಾ ಜೋಡಿಯಾಗಿ ಅಭಿನಯಿಸುತ್ತಿರುವ ಮೂರನೇ ಚಿತ್ರ. ಈ ಹಿಂದೆ ಈ ಜೋಡಿ ಸಿಂಹ ಮತ್ತು ಶ್ರೀ ರಾಮ ರಾಜ್ಯಂ ಚಿತ್ರದಲ್ಲಿ ಒಂದಾಗಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com