ಅರ್ಜುನ್ ಜನ್ಯ ಸಂಗೀತದೊಂದಿಗೆ ಪೈಲ್ವಾನ್ ಚಿತ್ರದ ಕೆಲಸ ಪ್ರಾರಂಭ

ಅಭಿನಯದ ಚಕ್ರವರ್ತಿ ಸುದೀಪ್ ಸದ್ಯ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದಲ್ಲಿ ಬ್ಯುಸಿಯಾಗಿದ್ದು ಅವರ ಮುಂದಿನ ಚಿತ್ರ ಪೈಲ್ವಾನ ಚಿತ್ರದ ಕೆಲಸಗಳು ಪ್ರಾರಂಭವಾಗಿದೆ...
ಸುದೀಪ್
ಸುದೀಪ್
Updated on
ಅಭಿನಯದ ಚಕ್ರವರ್ತಿ ಸುದೀಪ್ ಸದ್ಯ ಪ್ರೇಮ್ ನಿರ್ದೇಶನದ ದಿ ವಿಲನ್ ಚಿತ್ರದಲ್ಲಿ ಬ್ಯುಸಿಯಾಗಿದ್ದು ಅವರ ಮುಂದಿನ ಚಿತ್ರ ಪೈಲ್ವಾನ ಚಿತ್ರದ ಕೆಲಸಗಳು ಪ್ರಾರಂಭವಾಗಿದೆ. 
ಎಸ್ ಕೃಷ್ಣ ನಿರ್ದೇಶನದ ಪೈಲ್ವಾನ ಚಿತ್ರದಲ್ಲಿ ಸುದೀಪ್ ಅವರು ಬಾಕ್ಸರ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಚಿತ್ರದ ಮುಹೂರ್ತ ಸಿಂಪಲ್ ಆಗಿ ನಡೆದಿದ್ದು ಪೂಜೆಗೆ ಸುದೀಪ್ ಆಗಮಿಸಿದ್ದರು. 
ಸದ್ಯ ನಿರ್ದೇಶಕ ಕೃಷ್ಣ ಮೊದಲಿಗೆ ಅರ್ಜುನ್ ಜನ್ಯರ ಜತೆ ಸಂಗೀತ ಸಂಯೋಜನೆಯಲ್ಲಿ ತೊಡಗಿದ್ದು ಆ ಮೂಲಕ ಪೈಲ್ವಾನನ ಯೋಜನೆಗೆ ಚಾಲನೆ ಸಿಕ್ಕಿದೆ. ಚಿತ್ರದಲ್ಲಿ ಐದರಿಂದ ಆರು ಹಾಡುಗಳು ಇರಲಿವೆ. 
ದಿ ವಿಲನ್ ಚಿತ್ರದ ಶೂಟಿಂಗ್ ಜನವರಿ 10ರಂದು ಮುಗಿಯುವ ಸಾಧ್ಯತೆ ಇರುವುದರಿಂದ ಜನವರಿ 15ರಿಂದ ಪೈಲ್ವಾನ ಚಿತ್ರದ ಚಿತ್ರೀಕರಣದಲ್ಲಿ ಸುದೀಪ್ ಎಂಟ್ರಿ ಕೊಡಲಿದ್ದಾರೆ. ಸದ್ಯ ನಿರ್ದೇಶಕರು ಪ್ರ-ಪ್ರೊಡೆಕ್ಷನ್ ಕೆಲಸ ಹಾಗೂ ತಾರಾಗಣ ಆಯ್ಕೆಯಲ್ಲಿ ಬ್ಯುಸಿಯಾಗಿದ್ದಾರೆ. 
ಕೃಷ್ಣ ಮತ್ತು ಸುದೀಪ್ ಜೋಡಿ ಇದಕ್ಕೂ ಮುನ್ನ ಸೂಪರ್ ಹಿಟ್ ಹೆಬ್ಬುಲಿ ಚಿತ್ರವನ್ನು ನೀಡಿತ್ತು. ಹೆಬ್ಬುಲಿ ಚಿತ್ರದಲ್ಲಿ ನಡೆದಿದ್ದ ಮ್ಯಾಜಿಕ್ ಪೈಲ್ವಾನದಲ್ಲೂ ನಡೆಯಲಿದೆಯಾ ಎಂದು ಕಾದು ನೋಡಬೇಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com