ನಿಖಿಲ್
ನಿಖಿಲ್

ತಂದೆಯ ಜನ್ಮ ದಿನಾಚರಣೆಗೆ ಅಭಿಮನ್ಯು ಟೀಸರ್ ಉಡುಗೊರೆ ನೀಡಲಿರುವ ನಿಖಿಲ್

ಹೆಚ್ ಡಿಕೆ ಪುತ್ರ ನಿಖಿಲ್ ಕುಮಾರ್ ನಟಿಸಿರುವ ಕುರುಕ್ಷೇತ್ರ ಚಿತ್ರದ ಅಭಿಮನ್ಯು ಪಾತ್ರದ ಟೀಸರ್ ಡಿ.16 ರಂದು ಬಿಡುಗಡೆಯಾಗಲಿದ್ದು ತಂದೆಯ ಜನ್ಮದಿನದಂದು ನಿಖಿಲ್ ಕುಮಾರ್ ಟೀಸರ್ ಉಡುಗೊರೆ...
ಡಿ.16 ರಂದು ಸಿನಿಮಾ ನಿರ್ಮಾಪಕ, ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರ ಜನ್ಮದಿನ. ಅದೇ ದಿನದಂದು ಹೆಚ್ ಡಿಕೆ ಪುತ್ರ ನಿಖಿಲ್ ಕುಮಾರ್ ನಟಿಸಿರುವ ಕುರುಕ್ಷೇತ್ರ ಚಿತ್ರದ ಅಭಿಮನ್ಯು ಪಾತ್ರದ ಟೀಸರ್ ಬಿಡುಗಡೆಯಾಗಲಿದ್ದು ತಂದೆಯ ಜನ್ಮದಿನದಂದು ನಿಖಿಲ್ ಕುಮಾರ್ ಟೀಸರ್ ಉಡುಗೊರೆ ನೀಡಲಿದ್ದಾರೆ.  
ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಚಿತ್ರದಲ್ಲಿ ನಿಖಿಲ್ ಕುಮಾರ್ ಅಭಿಮನ್ಯು ಪಾತ್ರದಲ್ಲಿ ನಟಿಸಿದ್ದು, ಟೀಸರ್ ಮಾಗಡಿ ರಸ್ತೆಯಲ್ಲಿರುವ ಗೊಲ್ಲರಹಟ್ಟಿಯಲ್ಲಿ ಮಧ್ಯಾಹ್ನ 2 ಗಂಟೆಗೆ ಬಿಡುಗಡೆಯಾಗಲಿದೆ. ಕುರುಕ್ಷೇತ್ರ ಚಿತ್ರದಲ್ಲಿ ದರ್ಶನ್, ಅರ್ಜುನ್ ಸರ್ಜಾ, ಅಂಬರೀಶ್, ರವಿಶಂಕರ್ ನಟಿಸಿದ್ದಾರೆ. 
ಕುರುಕ್ಷೇತ್ರದಲ್ಲಿ ಅಭಿಮನ್ಯು ಪಾತ್ರದಲ್ಲಿ ನಟಿಸಿರುವ ನಿಖಿಲ್ ಕುಮಾರ್ ಹರ್ಷ ನಿರ್ದೇಶನದಲ್ಲಿ ತಮ್ಮ 3ನೇ ಚಿತ್ರಕ್ಕೆ ತಯಾರಿ ನಡೆಸಿದ್ದಾರೆ. 

Related Stories

No stories found.

Advertisement

X
Kannada Prabha
www.kannadaprabha.com