ಈ ಬಗ್ಗೆ ಮಾತನಾಡಿರುವ ನಿರ್ದೇಶಕ ತರುಣ್ ಸುಧೀರ್, ಅದಿತಿ ಬಗ್ಗೆ ನನಗೆ ಮೊದಲೇ ತಿಳಿದಿತ್ತು. ಆಕೆ ಉತ್ತಮ ಹಾಡುಗಾರ್ತಿ. ಅಕೆಯ ಪೋಷಕರೂ ಕೂಡ ಕಲಾವಿದರಾಗಿದ್ದು, ತಂದೆ ಅರುಣ್ ಸಾಗರ್ ನಮಗೆಲ್ಲರಿಗೂ ಚಿರಪರಿಚತರು. ಅದಿತಿ ಹಾಡಿರುವ ಒಂದಷ್ಟು ಹಾಡುಗಳನ್ನು ನಾನು ಕೇಳಿದ್ದೇನೆ. ಹೀಗಾಗಿ ಈ ಚಿತ್ರಕ್ಕೂ ಅದಿತಿ ಗಾಯನ ಮಾಡಲಿ ಎಂದು ನಿರ್ಧರಿಸಿದೆವು ಎಂದು ಹೇಳಿದ್ದಾರೆ. ಅಂತೆಯೇ ಈ ಹಾಡು ಮತ್ತೊಂದು ಅರ್ಜುನ್ ಜನ್ಯ ಅವರ ಮತ್ತೊಂದು ಸಿಗ್ನೇಚರ್ ಸಾಂಗ್ ಆಗಲಿದ್ದು, ಈ ಹಾಡು ಎಲ್ಲರಿಗೂ ಇಷ್ಟವಾಗಲಿದೆ ಎಂದೂ ತರುಣ್ ಸುಧೀರ್ ಹೇಳಿದ್ದಾರೆ.