ಈ ಬಗ್ಗೆ ಫೇಸ್ ಬುಕ್ ಮತ್ತು ಟ್ವಿಟರ್ ನಲ್ಲಿ ತಮ್ಮ ಪತ್ರವನ್ನು ಪೋಸ್ಟ್ ಮಾಡಿರುವ ನಟ ರೈ, "ಜಾತ್ಯತೀತ ಎಂದರೆ ವೈವಿಧ್ಯಮಯ ಧರ್ಮಗಳನ್ನು ಗೌರವಿಸುವುದು ಹಾಗೂ ಒಪ್ಪಿಸಿಕೊಳ್ಳುವುದಾಗಿದೆ. ಜಾತ್ಯತೀತ ಎಂದರೆ ಯಾವುದೇ ಧರ್ಮ ಅಥವಾ ನಂಬಿಕೆಯ ಜೊತೆ ಗುರುತಿಸಿಕೊಳ್ಳದಿರುವುದಲ್ಲ. ನಿಮ್ಮದು ಒಂದು ಅಗ್ಗದ ಹೇಳಿಕೆಯಾಗಿದೆ. ಒಬ್ಬನ ಪೋಷಕರ ಬಗ್ಗೆ ಇಷ್ಟೊಂದು ಕೀಳಾಗಿ ಮಾತನಾಡಿರುವುದು ನನಗೆ ತುಂಬಾ ಅಚ್ಚರಿ ಉಂಟು ಮಾಡಿದೆ. ಮನುಷ್ಯನ ರಕ್ತ ಆತನ ಧರ್ಮ ಮತ್ತು ಜಾತಿಯನ್ನು ನಿರ್ಧರಿಸುವುದಿಲ್ಲ. ಅಂತೆಯೇ ಜ್ಯಾತ್ಯಾತೀತ ಎಂದಾಕ್ಷಣ ಆತ ಯಾವುದೇ ಧರ್ಮ ಜಾತಿಗೆ ಸೇರದವನಲ್ಲ ಎಂದೂ ಅಲ್ಲ. ಜ್ಯಾತ್ಯಾತೀತ ಎನ್ನುವುದು ತನ್ನ ಇತರೆ ಧರ್ಮಗಳನ್ನು ಗೌರವಿಸುವುದಾಗಿದೆ ಎಂದು ರೈ ಕಿಡಿಕಾರಿದ್ದಾರೆ.