ಈ ಬಗ್ಗೆ ಸ್ವತಃ ಮುನಿರತ್ನ ಅವರೇ ಮಾಧ್ಯಮದ ಕೆಲ ಪ್ರತಿನಿಧಿಗಳಿಗೆ ಇತ್ತೀಚೆಗೆ ಅನೌಪಚಾರಿಕವಾಗಿ ಘೋಷಣೆ ಮಾಡಿದ್ದಾರಂತೆ. ಚಿತ್ರದ ಕಥೆ ಹೆಣೆಯಲಾಗುತ್ತಿದ್ದು ನಿರ್ದೇಶಕರನ್ನು ಕೂಡ ಹುಡುಕುತ್ತಿದ್ದಾರಂತೆ. ಕ್ರಿಸ್ತಪೂರ್ವ 3ನೇ ಶತಮಾನದ ಮೌರ್ಯ ದೊರೆ ಚಂದ್ರಗುಪ್ತ ಮತ್ತು ಅವನ ಸಲಹೆಗಾರ ಗುರು ಚಾಣಕ್ಯ, ನಂದ ರಾಜವಂಶ, ಅಲೆಕ್ಸಾಂಡರ್ ದೊರೆ ಮತ್ತು ಮೌರ್ಯ ಸಾಮ್ರಾಜ್ಯದ ಸ್ಥಾಪನೆ ಕುರಿತು ಚಿತ್ರ ತಯಾರಿಸಲಿದ್ದಾರಂತೆ.