'ಮಫ್ತಿ'ಗೆ ಮೈಸೂರಿನಲ್ಲಿ ಭರದಿಂದ ಚಿತ್ರೀಕರಣ

ನಟ ಶ್ರೀಮುರಳಿ ನಟಿಸುತ್ತಿರುವ 'ಮಫ್ತಿ' ಸಿನೆಮಾದ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗುತ್ತಿದ್ದು ನಟಿ ಶಾನ್ವಿ ಶ್ರೀವಾಸ್ತವ ಚಿತ್ರತಂಡ ಸೇರಿಕೊಂಡಿದ್ದಾರೆ.
ಶ್ರೀಮುರಳಿ-ಶಾನ್ವಿ ಶ್ರೀವಾಸ್ತವ
ಶ್ರೀಮುರಳಿ-ಶಾನ್ವಿ ಶ್ರೀವಾಸ್ತವ
Updated on: 
ಬೆಂಗಳೂರು: ನಟ ಶ್ರೀಮುರಳಿ ನಟಿಸುತ್ತಿರುವ 'ಮಫ್ತಿ' ಸಿನೆಮಾದ ಚಿತ್ರೀಕರಣ ಮೈಸೂರಿನಲ್ಲಿ ಭರದಿಂದ ಸಾಗುತ್ತಿದ್ದು ನಟಿ ಶಾನ್ವಿ ಶ್ರೀವಾಸ್ತವ ಚಿತ್ರತಂಡ ಸೇರಿಕೊಂಡಿದ್ದಾರೆ. ಬ್ಯುಸಿ ಕೆಲಸ ನಡುವೆ ವಾತಾವರಣವನ್ನು ಲವಲವಿಕೆಯಿಂದಿಡಲು, ನಟರು ಸೆಲ್ಫಿ ಮೊರೆ ಹೋಗಿ ಅವುಗಳನ್ನು ಹಂಚಿಕೊಂಡಿದ್ದಾರೆ. 
"ಚೊಚ್ಚಲ ನಿರ್ದೇಶಕ ನಾರ್ಥನ್ ಅವರ 'ಮಫ್ತಿ' ಸಿನೆಮಾದಲ್ಲಿ ನಟಿಸುವುದಕ್ಕೆ ಅತೀವ ಸಂತಸವಾಗುತ್ತಿದೆ. ಈ ಬಾರಿ ಮೈಸೂರಿನಲ್ಲಿ ನಾಲ್ಕು ದಿನ ಇರುತ್ತೇವೆ ಮತ್ತು ಶ್ರೀಮುರಳಿ ಜೊತೆಗೆ ನನ್ನ ಭಾಗದ ಚಿತ್ರೀಕರಣ ನಡೆಯಲಿದೆ" ಎನ್ನುತ್ತಾರೆ ನಟಿ ಶಾನ್ವಿ. 
ಜಯಣ್ಣ ಕಂಬೈನ್ಸ್ ನಿರ್ಮಿಸುತ್ತಿರುವ ಈ ಸಿನೆಮಾದಲ್ಲಿ ನಟ ಶಿವರಾಜಕುಮಾರ್ ಪ್ರಮುಖ ಪಾತ್ರವೊಂದನ್ನು ನಿರ್ವಹಿಸಲಿದ್ದಾರೆ. ಇದು ಶ್ರೀಮುರಳಿ ಜೊತೆಗೆ ಅವರು ಮೊದಲ ಬಾರಿಗೆ ನಟಿಸುತ್ತಿರುವುದು. ರವಿ ಬಸರೂರ್ ಸಂಗೀತ ನೀಡಿದ್ದಾರೆ, ನವೀನ್ ಅವರ ಸಿನೆಮ್ಯಾಟೋಗ್ರಫಿ ಚಿತ್ರಕ್ಕಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com