ಸಪ್ತಪದಿ ತುಳಿಯಲಿರುವ ನಿರ್ದೇಶಕ ಸಿಂಪಲ್ ಸುನಿ

ಸ್ಯಾಂಡಲ್ವುಡ್ ನಲ್ಲಿ ಡಿಸೆಂಬರ್ ೧೦ ರಂದು ಯಶ್-ರಾಧಿಕಾ ಜೋಡಿಯ ವಿವಾಹದ ನಂತರ ಸರಣಿ ಮದುವೆಗಳೊಂದಿಗೆ ಸೀಸನ್ ಮುಂದುವರೆದಿದೆ. ಇವುಗಳಲ್ಲಿ ಹೆಚ್ಚು ನಿರ್ದೇಶಕರದ್ದೇ ಎಂಬುದು ವಿಶೇಷ.
ನಿರ್ದೇಶಕ ಸಿಂಪಲ್ ಸುನಿ
ನಿರ್ದೇಶಕ ಸಿಂಪಲ್ ಸುನಿ
Updated on: 
ಬೆಂಗಳೂರು: ಸ್ಯಾಂಡಲ್ವುಡ್ ನಲ್ಲಿ ಡಿಸೆಂಬರ್ ೧೦ ರಂದು ಯಶ್-ರಾಧಿಕಾ ಜೋಡಿಯ ವಿವಾಹದ ನಂತರ ಸರಣಿ ಮದುವೆಗಳೊಂದಿಗೆ ಸೀಸನ್ ಮುಂದುವರೆದಿದೆ. ಇವುಗಳಲ್ಲಿ ಹೆಚ್ಚು ನಿರ್ದೇಶಕರದ್ದೇ ಎಂಬುದು ವಿಶೇಷ.
'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಖ್ಯಾತಿಯ ನಿರ್ದೇಶಕ ಹೇಮಂತ್ ರಾವ್ ಇತ್ತೀಚೆಗಷ್ಟೇ ವಿವಾಹವಾಗಿದ್ದರು, ನಂತರ ಬದ್ಮಾಶ್ ನಿರ್ದೇಶಕ ಆಕಾಶ್ ಶ್ರೀವತ್ಸ ಮತ್ತು ಫೆಬ್ರವರಿ ೯ ರಂದು ರಿಷಬ್ ಶೆಟ್ಟಿ ಅವರ ವಿವಾಹ ಮಹೋತ್ಸವಗಳು ನಿಗದಿಯಾಗಿವೆ. ಈಗ ಬಂಡಿಯನ್ನು ಹತ್ತಿರುವವರು 'ಸಿಂಪಲ್ ಆಗ್ ಒಂದು ಲವ್ ಸ್ಟೋರಿ' ನಿರ್ದೇಶಕ ಸುನಿ. 
ತಮ್ಮ ಪ್ರೇಮ ಜೀವನದ ಬಗ್ಗೆ ತಿಳಿಸುವ ಸುನಿ "ಅವರ ಹೆಸರು ಸೌಂದರ್ಯ ಗೌಡ. ನಾವು ೪ ವರ್ಷಗಳಿಂದ ಪ್ರೀತಿಸುತ್ತಿದ್ದೆವು ಮತ್ತು ಈಗ ನಮ್ಮ ಕುಟುಂಬಗಳ ಆಶೀರ್ವಾದದೊಂದಿಗೆ ಫೆಬ್ರವರಿ ೧೭ ಕ್ಕೆ ಸಪ್ತಪದಿ ತುಳಿಯಲಿದ್ದೇವೆ" ಎನ್ನುತ್ತಾರೆ.
"ಅವರು ಕಾನೂನು ಓದಿ ಮುಗಿಸಿದ್ದಾರೆ ಆದರೆ ಇದೀಗ ಬರಹಗಾರ್ತಿ. ಅವರು ಈಗ ಸಿನೆಮಾಗಳಲ್ಲಿ ತೊಡಗಿಸಿಕೊಂಡಿದ್ದು, ನನ್ನ ಸಿನೆಮಾ ಪ್ರಯಾಣದಲ್ಲಿ ಕೂಡ ಕೈಜೋಡಿಸಲಿದ್ದಾರೆ" ಎಂದು ಕೂಡ ತಿಳಿಸುತ್ತಾರೆ. 
ಮಾಡುವೆ ಸಮಾರಂಭ ಖಾಸಗಿಯಾಗಿ ನಡೆಯಲಿದ್ದು, ಉದ್ದಿಮೆಯ ಗೆಳೆಯರು ಮತ್ತು ಸಹೋದ್ಯೋಗಿಗಳಿಗಾಗಿ ವಿಭಿನ್ನ ಔತಣಕೂಟ  ಏರ್ಪಡಿಸಲಿದ್ದಾರಂತೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com