ಕನಕ ಚಿತ್ರದ ಸಂಪಿಗೆ ಪಾತ್ರಕ್ಕೆ ಹರಿಪ್ರಿಯಾ

ನಿರ್ದೇಶಕ ಆರ್ ಚಂದ್ರು ಅವರ ಕನಕ ಸಿನಿಮಾದಲ್ಲಿ ದುನಿಯಾ ವಿಜಯ್ ಗೆ ನಾಯಕಿಯಾಗಿ ಅಂತಿಮವಾಗಿ ಹರಿಪ್ರಿಯಾ ಆಯ್ಕೆಯಾಗಿದ್ದಾರೆ..,..
ಹರಿಪ್ರಿಯಾ
ಹರಿಪ್ರಿಯಾ
ಬೆಂಗಳೂರು: ನಿರ್ದೇಶಕ ಆರ್ ಚಂದ್ರು ಅವರ ಕನಕ ಸಿನಿಮಾದಲ್ಲಿ ದುನಿಯಾ ವಿಜಯ್ ಗೆ ನಾಯಕಿಯಾಗಿ ಅಂತಿಮವಾಗಿ ಹರಿಪ್ರಿಯಾ ಆಯ್ಕೆಯಾಗಿದ್ದಾರೆ.
ಜುಲೈ 12 ರಿಂದ ಹರಿಪ್ರಿಯ ಸಿನಿಮಾ ಶೂಟಿಂಗ್ ನಲ್ಲಿ ಪಾಲ್ಗೋಳ್ಳಲಿದ್ದಾರೆ. ಹರಿಪ್ರಿಯಾ ವಿಜಯ್ ಗೆ ನಾಯಕಿಯಾಗಿ ನಟಿಸುತ್ತಿರುವುದು ಸಂತಸದ ವಿಷಯ. ಸಿನಿಮಾದ ಸಂಪಿಗೆ ಪಾತ್ರಕ್ಕೆ ಹರಿಪ್ರಿಯಾ ಸೂಕ್ತವಾಗಿದ್ದಾರೆ. 
ಪಾತ್ರಕ್ಕೆ ಪೂರಕವಾಗಿ ಹರಿಪ್ರಿಯಾ ನಟಿಸಲಿದ್ದಾರೆ ಎಂದು ಚಂದ್ರು ಅಭಿಪ್ರಾಯ ಪಟ್ಟಿದ್ದಾರೆ.
ವಿಜಯ್ ಮತ್ತು ಹರಿಪ್ರಿಯಾ ಮೊದಲ ಬಾರಿಗೆ ನಟಿಸುತ್ತಿದ್ದು, ಮಾನ್ವಿತಾ ಹರೀಶ್ ಕೂಡಾ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.ಚಿತ್ರೀಕರಣ ಸ್ಥಳಗಳು ಅಂತಿಮವಾಗಿದ್ದು, ಕರ್ನಾಟಕದ ಹಲವು ಭಾಗಗಳಲ್ಲಿ ಶೂಟಿಂಗ್ ನಡೆಯಲಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com