ತಮಿಳು ಬಿಗ್ ಬಾಸ್ ಗೆ ಆರಂಭದಲ್ಲೇ ವಿಘ್ನ; ಶೋ ನಿಷೇಧಿಸುವಂತೆ ಸಂಘಟನೆಗಳ ಆಗ್ರಹ

ಖ್ಯಾತ ನಟ ಕಮಲ್ ಹಾಸನ್ ನಿರೂಪಣೆ ಮಾಡುತ್ತಿರುವ ಬಿಗ್ ಬಾಸ್ ತಮಿಳು ಅವತರಣಿಕೆಯ ಕಾರ್ಯಕ್ರಮಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಕಾರ್ಯಕ್ರಮವನ್ನು ನಿಷೇಧಿಸುವಂತೆ ತಮಿಳು ಪರ ಸಂಘಟನೆಗಳು ಆಗ್ರಹಿಸುತ್ತಿವೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 

ಚೆನ್ನೈ: ಖ್ಯಾತ ನಟ ಕಮಲ್ ಹಾಸನ್ ನಿರೂಪಣೆ ಮಾಡುತ್ತಿರುವ ಬಿಗ್ ಬಾಸ್ ತಮಿಳು ಅವತರಣಿಕೆಯ ಕಾರ್ಯಕ್ರಮಕ್ಕೆ ಆರಂಭದಲ್ಲೇ ವಿಘ್ನ ಎದುರಾಗಿದ್ದು, ಕಾರ್ಯಕ್ರಮವನ್ನು ನಿಷೇಧಿಸುವಂತೆ ತಮಿಳು ಪರ ಸಂಘಟನೆಗಳು ಆಗ್ರಹಿಸುತ್ತಿವೆ.

ಸಂಘಟನೆಗಳು ಆರೋಪಿಸಿರುವಂತೆ ಕಾರ್ಯಕ್ರಮದಲ್ಲಿ ಸ್ಪರ್ಧಾಳುಗಳು ಅಶ್ಲೀಲ ಬಟ್ಟೆಗಳನ್ನು ತೊಡುತ್ತಿದ್ದು, ಅಲ್ಲದೆ ಅಶ್ಲೀಲ ಪದ ಪ್ರಯೋಗ ಮಾಡುತ್ತಿದ್ದಾರೆ. ಇದರಿಂದ ತಮಿಳು ಸಂಸ್ಕೃತಿಗೆ ಧಕ್ಕೆಯಾಗುತ್ತಿದ್ದು, ಕೂಡಲೇ  ಕಾರ್ಯಕ್ರಮವನ್ನು ನಿಷೇಧಿಸಬೇಕು ಎಂದು ತಮಿಳ್ ಮಕ್ಕಳ್ ಕಚ್ಚಿ ಎಂಬ ಸಂಘಟನೆ ದೂರು ದಾಖಲಿಸಿದೆ. ಅಂತೆಯೇ ಕಾರ್ಯಕ್ರಮದ ನಿರೂಪಕ ಕಮಲ್ ಹಾಸನ್ ಅವರನು ಬಂಧಿಸಿ ಕಾರ್ಯಕ್ರಮದ ಸ್ಪರ್ಧಾಳುಗಳ ವಿರುದ್ಧವೂ  ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.

ಕಾರ್ಯಕ್ರಮದಲ್ಲಿ ಸ್ಪರ್ಧಿಗಳ ವೇಷಭೂಷಣ ಅಶ್ಲೀಲವಾಗಿದ್ದು, ತುಂಡುಡುಗೆ ತಮಿಳು ಸಂಸ್ಕೃತಿಗೆ ವಿರುದ್ಧವಾದದ್ದಾಗಿದೆ. ಅಲ್ಲದೆ ಸ್ಪರ್ಧಿಗಳು ಅಶ್ಲೀಲ ಪದ ಬಳಕೆ ಮಾಡುತ್ತಿದ್ದು, ಇದು ತಮಿಳುನಾಡಿ 7 ಕೋಟಿ ತಮಿಳರ ಭಾವನೆಗೆ  ಧಕ್ಕೆಯುಂಟಾಗುತ್ತಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

ಕಳೆದ ಜೂನ್ 25ರಿಂದ ತಮಿಳು ಬಿಗ್ ಬಾಸ್ ಕಾರ್ಯಕ್ರಮ ಆರಂಭವಾಗಿದ್ದು, ಸ್ಟಾರ್ ವಿಜಯ್ ಟಿವಿಯಲ್ಲಿ ಕಾರ್ಯಕ್ರಮ ಪ್ರಸಾರವಾಗುತ್ತಿದೆ. ಇದೇ ಮೊದಲ ಬಾರಿಗೆ ಕಿರುತೆರೆಗೆ ಪದಾರ್ಪಣೆ ಮಾಡಿರುವ ನಟ ಕಮಲ್ ಹಾಸನ್  ಅವರು ಕಾರ್ಯಕ್ರಮವನ್ನು ನಿರೂಪಣೆ ಮಾಡುತ್ತಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com