
ಬೆಂಗಳೂರು: ದಂಡುಪಾಳ್ಯ-2 ಚಿತ್ರದಲ್ಲಿನ ನಟಿ ಸಂಜನಾ ಅವರ ನಗ್ನ ವಿಡಿಯೋ ಲೀಕ್ ಆದ ಕುರಿತು ಭಾರಿ ವಿವಾದಕ್ಕೆ ಗ್ರಾಸವಾಗಿರುವಂತೆಯೇ ನಟ ಹುಚ್ಚಾ ವೆಂಕಟ್ ಚಿತ್ರತಂಡದ ವಿರುದ್ಧ ಕಡಿಕಾರಿದ್ದಾರೆ.
ವಿಡಿಯೋ ಜಾಲತಾಣ ಯೂಟ್ಯೂಬ್ ನಲ್ಲಿ ಈ ಬಗ್ಗೆ ವಿಡಿಯೋ ರಿಲೀಸ್ ಮಾಡಿರುವ ಹುಚ್ಚಾ ವೆಂಕಟ್ ಚಿತ್ರ ನಿರ್ದೇಶಕ ಶ್ರೀನಿವಾಸ ರಾಜು ಅವರ ವಿರುದ್ಧ ಕಿಡಿಕಾರಿದ್ದಾರೆ. ಹೆಣ್ಣುಮಕ್ಕಳನ್ನು ನಗ್ನವಾಗಿ ತೋರಿಸಿರುವ ನಿರ್ದೇಶಕ ಆ ಸ್ಥಾನದಲ್ಲಿ ನಿಮ್ಮ ಮನೆ ಹೆಣ್ಣುಮಕ್ಕಳು ಇದ್ದಿದ್ದರೆ ಹೀಗೆಯೇ ತೋರಿಸುತ್ತಿದ್ದರೇ ಎಂದು ಅವಾಚ್ಯ ಶಬ್ಜಗಳಿಂದ ಕಿಡಿಕಾರಿದ್ದಾರೆ.
ಕೇವಲ ಹಣಕ್ಕಾಗಿ ಹೆಣ್ಣು ಮಕ್ಕಳನ್ನು ಹೀಗೆಲ್ಲಾ ಅಶ್ಲೀಲವಾಗಿ ತೋರಿಸುತ್ತಿರುವುದು ತಪ್ಪು ಎಂದಿರುವ ವೆಂಕಟ್, ಚಿತ್ರ ನೋಡಿದ ಪ್ರೇಕ್ಷಕರನ್ನೂ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಒಳ್ಳೆ ಸಿನಿಮಾಗಳಿಗೆ ಬಾರದ ನೀವು ಇಂತಹ ಚಿತ್ರಗಳಿನ್ನು ಮುಗಿಬಿದ್ದು ನೋಡಿತ್ತಾರೆ ಎಂದು ವೆಂಕಟ್ ಕಿಡಿಕಾರಿದ್ದಾರೆ. ವೆಂಕಟ್ ಅವರ ಈ ವಿಡಿಯೋ ಇದೀಗ ವ್ಯಾಪಕ ಸುದ್ದಿಗೆ ಗ್ರಾಸವಾಗಿದೆ.
Advertisement