ಕಾಲಿವುಡ್ ಗೆ ಮರಳಿದ ಅಕ್ಷರಾ ಗೌಡ: ಬಿಲ್ಲಾ-3 ಚಿತ್ರದಲ್ಲಿ ಸಿಂಬುಗೆ ನಾಯಕಿ

ತಮಿಳು, ಹಿಂದಿ ಮತ್ತು ಕನ್ನಡ ಸಿನಿಮಾಗಳಲ್ಲಿ ನಿರತವಾಗಿರುವ ನಟಿ ಅಕ್ಷರಾ ಗೌಡ ಮತ್ತೆ ತಮಿಳಿನಲ್ಲಿ ಮತ್ತೊಂದು ಬಿಗ್ ಬ್ರೇಕ್ ಕೊಡಲು...
ಅಕ್ಷರಾ ಗೌಡ
ಅಕ್ಷರಾ ಗೌಡ
ಬೆಂಗಳೂರು: ತಮಿಳು, ಹಿಂದಿ ಮತ್ತು ಕನ್ನಡ ಸಿನಿಮಾಗಳಲ್ಲಿ ನಿರತವಾಗಿರುವ ನಟಿ ಅಕ್ಷರಾ ಗೌಡ ಮತ್ತೆ ತಮಿಳಿನಲ್ಲಿ ಮತ್ತೊಂದು ಬಿಗ್ ಬ್ರೇಕ್ ಕೊಡಲು ಮುಂದಾಗಿದ್ದಾರೆ. 
ತಮಿಳಿನ ಬಿಲ್ಲಾ- 3 ಸಿನಿಮಾದಲ್ಲಿ ಸಿಂಬು ಅಲಿಯಾಸ್ ಸಿಲಂಬರಸನ್ ಜೊತೆ ನಾಯಕಿಯಾಗಿ ನಟಿಸಲಿದ್ದಾರೆ. ಸಿಂಬು ಈ ಸಿನಿಮಾ ನಿರ್ದೇಶಿಸಿ ನಿರ್ಮಾಣ ಮಾಡಲಿದ್ದಾರೆ.
ಅಕ್ಟೋಬರ್ ಮೊದಲ ವಾರದಲ್ಲಿ ಶೂಟಿಂಗ್ ಆರಂಭವಾಗಲಿದ್ದು, ಆಗಸ್ಟ್ ಮೊದಲ ವಾರದಲ್ಲಿ ಅಮೆರಿಕಾಗೆ ತೆರಳಲಿದ್ದಾರೆ. ಸಿನಿಮಾದ ಬಹುತೇಕ ಭಾಗ ಚಿತ್ರೀಕರಣ ವಿದೇಶದಲ್ಲಿ ನಡೆಯಲಿದೆ, ಕೆಲ ಸನ್ನಿವೇಶಗಳನ್ನು ಮುಂಬಯಿಯಲ್ಲಿ ಚಿತ್ರೀಕರಿಸಲಾಗುತ್ತದೆ. ಶೀಘ್ರವೇ ಸಿನಿಮಾ ತಂಡ ಟೀಸರ್ ಬಿಡುಗಡೆ ಮಾಡಲಿದೆ.
ನಾಯಕಿಗಾಗಿ ಹುಡುಕಾಟ ನಡೆಸುತ್ತಿದ್ದ ಸಿಂಬು ಅಕ್ಷರಾ ಗೌಡ ರನ್ನು ಆಯ್ಕೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಸಿನಿಮಾ ಬಗ್ಗೆ ಹೆಚ್ಚಿನ ವಿವರವನ್ನು ಚಿತ್ರ ತಂಡ ನೀಡಲಿದೆ.
ಬಿಲ್ಲಾ ಕ್ರೇಜ್ ರಜನಿಕಾಂತ್  ರಿಂದ ಆರಂಭವಾಯಿತು, ನಂತರ, ಅಜಿತ್ ಬಿಲ್ಲಾ-2 ಮುಂದುವರಿಸಿದರು, ಸದ್ಯ ಸಿಂಬು ಬಿಲ್ಲಾ-3ಗಾಗಿ ಸಿದ್ಧತೆ ನಡೆಸುತ್ತಿದ್ದಾರೆ.
ಅಕ್ಷರಾ ಗೌಡ ಕನ್ನಡದ ಪ್ರೇಮದಲ್ಲಿ ಸಿನಿಮಾ ಶೂಟಿಂಗ್ ಪೂರ್ಣಗೊಳಿಸಿದ್ದು,  ಗೌಸ್ ಪೀರ್ ನಿರ್ದೇಶನದ ಮುಂದಿನ ಸಿನಿಮಾದಲ್ಲಿ ಅಕ್ಷರಾ ಅಭಿನಯಿಸಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com