ಪತ್ನಿಗಿಂತ ಗರ್ಲ್ ಫ್ರೆಂಡ್ ನಿಭಾಯಿಸೋದು ಸುಲಭ: ರಕ್ಷಿತ್ ಶೆಟ್ಟಿ

ನಟ ರಕ್ಷಿತ್ ಶೆಟ್ಟಿ ಮತ್ತು ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಅವರ ಗುಪ್ತ ಪ್ರೇಮ ಪ್ರಕರಣಕ್ಕೆ ಈಗ ಅಧಿಕೃತ ಮುದ್ರೆ ಬಿದ್ದಿದ್ದು, ತಮ್ಮ ನಿಶ್ಚಿತಾರ್ಥ ಜುಲೈ ೩ ಕ್ಕೆ ನೆರವೇರಲಿದೆ ಎಂದು ರಕ್ಷಿತ್
ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ
ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ
Updated on: 
ಬೆಂಗಳೂರು: ನಟ ರಕ್ಷಿತ್ ಶೆಟ್ಟಿ ಮತ್ತು ಕೊಡಗಿನ ಬೆಡಗಿ ನಟಿ ರಶ್ಮಿಕಾ ಮಂದಣ್ಣ ಅವರ ಗುಪ್ತ ಪ್ರೇಮ ಪ್ರಕರಣಕ್ಕೆ ಈಗ ಅಧಿಕೃತ ಮುದ್ರೆ ಬಿದ್ದಿದ್ದು, ತಮ್ಮ ನಿಶ್ಚಿತಾರ್ಥ ಜುಲೈ ೩ ಕ್ಕೆ ನೆರವೇರಲಿದೆ ಎಂದು ರಕ್ಷಿತ್ ತಿಳಿಸಿದ್ದಾರೆ.

ಇದೆಲ್ಲ ಪ್ರಾರಂಭವಾಗಿದ್ದು ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಮಾಡಿದ ಪ್ರತಿಕ್ರಿಯೆಯಿಂದ. ಜೂನ್ ೬ ರಂದು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದ ರಕ್ಷಿತ್ ಅವರಿಗೆ ಶುಭಾಶಯ ಹೇಳಿದ್ದ ರಶ್ಮಿಕಾ "ನಾನು ಭೇಟಿ ಮಾಡಿರುವ ಅತಿ ವಿನೀತ ವ್ಯಕ್ತಿಗಳಲ್ಲಿ ಒಬ್ಬರಾದ ರಕ್ಷಿತ್ ಗೆ ಹುಟ್ಟು ಹಬ್ಬದ ಆತ್ಮೀಯ ಶುಭಾಶಯಗಳು. ಅಪ್ರಯತ್ನಪೂರ್ವಕವಾಗಿ ಜನ ನಿಮ್ಮನ್ನು ಪ್ರೀತಿಸುತ್ತಾರೆ. ಅದರಲ್ಲಿ ನನ್ನ ಪೋಷಕರು ಕೂಡ ಸೇರಿದ್ದಾರೆ. ನಮ್ಮ ಸಣ್ಣ ಕುಟುಂಬಕ್ಕೆ ಸ್ವಾಗತ" ಎಂದು ಬರೆದಿದ್ದರು. 
ಈ ಸಿಹಿಸುದ್ದಿಯನ್ನು ಧೃಢೀಕರಿಸುತ್ತ ಸುಂದರ ದಿನ ಕಳೆದ ರಕ್ಷಿತ್ "ಮಾಧ್ಯಮಗಳ ವರದಿ ನಂತರ ನಮ್ಮ ಕುಟುಂಬಗಳು ಒಟ್ಟಾಗಿ ಒಪ್ಪಿಗೆ ನೀಡಿದವು. ಈಗ ನಾವು ಅದರ ಬಗ್ಗೆ ಮಾತನಾಡಬಹುದು. ನನ್ನ ನಿಶ್ಚಿತಾರ್ಥವನ್ನು ಘೋಷಿಸಲು ಈಗ ಸಂತಸವಾಗುತ್ತಿದೆ" ಎನ್ನುತ್ತಾರೆ ರಕ್ಷಿತ್. 
ಮದುವೆ ಆಗಲು ಎರಡು ವರ್ಷ ಕಾಯುತ್ತಿರುವುದೇಕೆ ಎಂದು ರಕ್ಷಿತ್ ಅವರನ್ನು ಪ್ರಶ್ನಿಸಿದರೆ "ನನ್ನ ವೃತ್ತಿಜೀವನದ ಈ ಸಮಯದಲ್ಲಿ ಕಾಯುವುದು ಅತಿ ಮುಖ್ಯ. ಸಾಕಷ್ಟು ಕೆಲಸ ಮಾಡುವುದಕ್ಕಿದೆ" ಎನ್ನುತ್ತಾರೆ. ಅದು ಅಲ್ಲದೆ ಪತ್ನಿಗೆ ಬೇಕಾಗುವಷ್ಟು ಸಮಯ ನೀಡಲು ಸದ್ಯಕ್ಕೆ ಸಾಧ್ಯವಾಗುವುದಿಲ್ಲ ಎನ್ನುವ ಅವರು ಗರ್ಲ್ ಫ್ರೆಂಡ್ ನಿರೀಕ್ಷೆಗಳನ್ನು ಪೂರೈಸಬಹುದು ಮತ್ತು ಅದ್ಕಕಾಗಿ ಸಮಯ ಕಳೆಯಬಹುದು ಎನ್ನುತ್ತಾರೆ. "ವೈಯಕ್ತಿಕ ಮತ್ತು ವೃತ್ತಿ ಜೀವನವನ್ನು ಸರಿದೂಗಿಸಲು" ಎರಡು ವರ್ಷ ಸಮಯ ತೆಗೆದುಕೊಂಡಿರುವುದಾಗಿ ತಿಳಿಸುತ್ತಾರೆ ರಕ್ಷಿತ್. 
ರಶ್ಮಿಕಾ ಕೂಡ ಸದ್ಯಕ್ಕೆ ತೆಲುಗು ಮತ್ತು ಕನ್ನಡ ಚಿತ್ರರಂಗದಲ್ಲಿ ಅತಿ ಬೇಡಿಕೆಯ ನಟಿಯಾಗಿದ್ದು ಹಲವು ಸಿನೆಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com