ವೀಕೆಂಡ್ ವಿತ್ ರಮೇಶ್: ಸಾಧಕರ ಕುರ್ಚಿಯಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಈ ವಾರದ ಎಪಿಸೋಡ್ ನಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ...
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ
ಬೆಂಗಳೂರು: ಹಲವಾರು ವಿಭಿನ್ನ ಶೈಲಿಯ ಧಾರಾವಾಹಿಗಳು, ಟಾಕ್ ಶೋ, ರಿಯಾಲಿಟಿ ಶೋ ಸೇರಿದಂತೆ ಹಲವಾರು ವಿಶಿಷ್ಟ ಕಾರ್ಯಕ್ರಮಗಳನ್ನು ತನ್ನ ವೀಕ್ಷಕರಿಗಾಗಿ ನೀಡುತ್ತಾ ಬಂದಿರುವ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ 'ವೀಕೆಂಡ್ ವಿತ್ ರಮೇಶ್-3' ಕಾರ್ಯಕ್ರಮದಲ್ಲಿ ಈ ವಾರದ ಎಪಿಸೋಡ್ ನಲ್ಲಿ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡ ಭಾಗವಹಿಸಲಿದ್ದಾರೆ.
ಮೊದಲ ಸೀಸನ್ ನಲ್ಲೇ ದೇವೇಗೌಡರನ್ನು ಕರೆತರುವ ಪ್ರಯತ್ನ ಮಾಡಲಾಗಿತ್ತು, ಆದರೆ ಸಾಧ್ಯವಾಗಿರಲಿಲ್ಲ, ಜೂನ್ 10 ಮತ್ತು ಜೂನ್ 11 ರಂದು ರಾತ್ರಿ 9 ಗಂಟೆಗೆ ಕಾರ್ಯಕ್ರಮ ಪ್ರಸಾರವಾಗಲಿದೆ. ಜೊತೆಗೆ ಮುಂದಿನ ಎಪಿಸೋಡ್ ಗಳಲ್ಲಿ ಹಲವು ಜನಪ್ರಿಯ ನಾಯಕರು ಕಾಣಿಸಿಕೊಳ್ಳಲಿದ್ದಾರೆ.
ಎಚ್.ಡಿ.ದೇವೇಗೌಡ ರವರ ನೆನಪಿನ ಶಕ್ತಿ ಅಗಾಧವಾದದು. ಅವರ ಬಗ್ಗೆ ಅನೇಕರಿಗೆ ಗೊತ್ತಿಲ್ಲದ ಅದೆಷ್ಟೋ ವಿಷಯಗಳು 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಬಹಿರಂಗವಾಗಲಿದೆ.ಕಾರ್ಯಕ್ರಮವನ್ನು ಅಬ್ಬಾಯಿ ನಾಯ್ಡು ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com